ಬದನಾಜೆ ಬಸ್ ತಂಗುದಾಣದಲ್ಲಿ ರಕ್ತ, ತಲೆಯ ಒಳಭಾಗದ ಮಾಂಸದ ತುಣುಕು ಪತ್ತೆ! ಸ್ಥಳೀಯರಲ್ಲಿ ಆತಂಕ

IMG-20220629-WA0002
Published on

ವಿಟ್ಲ(ಮಂಗಳೂರು): ಇಲ್ಲಿನ ವಿಟ್ಲ- ಕಬಕ ರಸ್ತೆಯ ಬದನಾಜೆ ಬಸ್ ತಂಗುದಾಣದಲ್ಲಿ ಬುಧವಾರ ಮುಂಜಾನೆ ರಕ್ತ ಮತ್ತು ತಲೆಯ ಒಳಭಾಗದ ರೀತಿಯ ಮಾಂಸದ ತುಣುಕುಗಳು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಬಸ್ ನಿಲ್ದಾಣದಲ್ಲಿ ಯಾರನ್ನಾದರೂ ಹತ್ಯೆ ಮಾಡಲಾಗಿದೆಯೇ? ಅಥವಾ ಅಪಘಾತದಿಂದ ಗಾಯಗೊಂಡವರು ಯಾರದರೂ ಬಸ್ ನಿಲ್ದಾಣದಲ್ಲಿ ಕುಳಿತು ಮತ್ತೆ ಆಸ್ಪತ್ರೆಗೆ ತೆರಳಿರಬಹುದೇ ಎಂಬ ಅನುಮಾನಗಳು ಸಾರ್ವಜನಿಕರಲ್ಲಿ ಸೃಷ್ಟಿಯಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ. ಪ್ರಕರಣದ ಸತ್ಯಾಂಶ ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net