ಚಲಿಸುತ್ತಿದ್ದ ಬಸ್​​ ಹಿಂಭಾಗದ ಚಕ್ರದಲ್ಲಿ ಕಳಚಿಬಿದ್ದ ನಟ್​, ಆಟೋ ಚಾಲಕನಿಂದ ಪ್ರಯಾಣಿಕರು ಸೇಫ್​​!

Raychuru
Published on

ರಾಯಚೂರು: ಸಾರಿಗೆ ಸಂಸ್ಥೆ ಬಸ್ ಹಿಂಭಾಗದ ಚಕ್ರದ ನಟ್ ಕಳಿಚಿ ಬಿದ್ದು ಆಗಬಹುದಾಗಿದ್ದ ಅವಘಡವನ್ನು ಆಟೋ ಚಾಲಕ ತಪ್ಪಿಸಿದ್ದಾನೆ.

ತಾಲೂಕಿನ ತಲಮಾರಿಯಿಂದ ರಾಯಚೂರಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಹಿಂಬದಿ ಚಕ್ರದ ಎಂಟು ನಟ್ ಗಳಲ್ಲಿ ಆರು ಕಳಚಿ ಬಿದ್ದಿವೆ, ಎರಡು ನಟ್ ಗಳ ಆಧಾರದಲ್ಲಿ ಸಂಚರಿಸುತ್ತಿದೆ. ಇದು ಚಾಲಕನ ಗಮನಕ್ಕೂ ಬಂದಿರಲಿಲ್ಲ. ಪಕ್ಕದಲ್ಲೇ ಸಂಚರಿಸಿದ ಆಟೋ ಚಾಲಕನೊಬ್ಬ ಇದನ್ನು ಗಮನಿಸಿ ಕೂಡಲೇ ಬಸ್​ ನಿಲ್ಲಿಸಿದ್ದಾರೆ.

ಚಕ್ರದ ನಟ್ ಕಳಚಿಬಿದ್ದಿರುವ ಬಗ್ಗೆ ಬಸ್​ ಚಾಲಕನಿಗೆ ವಿಷಯ ತಿಳಿಸಿದ್ದ ಕೂಡಲೇ ಬಸ್ ನಲ್ಲಿದ್ದ ಪ್ರಯಾಣಿಕರನ್ನು ಇಳಿಸಿ ಬೇರೆ ವಾಹನದಲ್ಲಿ ಕಳುಹಿಸಲಾಗಿದೆ. ಆಟೋ ಚಾಲಕನ ಸಮಯ ಪ್ರಜ್ಞೆಯಿಂದ ಆಗಬಹುದಾಗಿದ್ದ ಅವಘಡ ತಪ್ಪಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net