ಹುಬ್ಬಳ್ಳಿ-ಧಾರವಾಡದಲ್ಲಿ ಅಷ್ಟವಿನಾಯಕ ಸ್ಪರ್ಧೆ 2022: ವಿಜಯವಾಣಿ-ದಿಗ್ವಿಜಯ ನ್ಯೂಸ್​ನಿಂದ ಆಯೋಜನೆ

vijayavani ganesha
Published on

ಹುಬ್ಬಳ್ಳಿ: ಸಾರ್ವಜನಿಕ ಗಣೇಶೋತ್ಸವ ಮತ್ತೆ ಬಂದಿದೆ. ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್​ ಈ ಹಿಂದೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ 8 ಬಾರಿ ಅಷ್ಟ ವಿನಾಯಕ ಸ್ಪರ್ಧೆ ಆಯೋಜಿಸಿತ್ತು. ಇದಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿತ್ತು. ಈ ಸಲವೂ ಅಷ್ಟವಿನಾಯಕ ಸ್ಪರ್ಧೆ ಆಯೋಜಿಸಲಾಗಿದೆ.

ಅವಳಿ ನಗರದ 16 ಅತ್ಯುತ್ತಮ ಸಾರ್ವಜನಿಕ ಗಣಪತಿಗಳನ್ನು ಗುರುತಿಸಿ ಬಹುಮಾನ ನೀಡುವ ಸ್ಪರ್ಧೆ ಇದಾಗಿದೆ. ಉತ್ತಮ ವಿಗ್ರಹ ಹಾಗೂ ಉತ್ತಮ ಅಲಂಕಾರ (ರೂಪಕ) ವಿಭಾಗದಲ್ಲಿ ತಲಾ 8 ಬಹುಮಾನ ನೀಡಲಾಗುವುದು. ಮೊದಲ ಮೂರು ಹಾಗೂ ಐದು ಸಮಾಧಾನಕರ ಬಹುಮಾನಗಳು ಇದರಲ್ಲಿ ಸೇರಿವೆ. ಆಕರ್ಷಕ ಪಾರಿತೋಷಕದ ಜತೆಗೆ ನಗದು ಬಹುಮಾನ ನೀಡಲಾಗುವುದು. ಪ್ರಥಮ ಬಹುಮಾನ 25000 ರೂ., ದ್ವಿತೀಯ ಬಹುಮಾನ 15000, ತೃತೀಯ ಬಹುಮಾನ 10000 ರೂ. ಹಾಗೂ ಎರಡೂ ವಿಭಾಗ ಸೇರಿ 10 ಸಮಾಧಾನಕರ ಬಹುಮಾನ ನೀಡಲಾಗುವುದು.

ಶ್ರೀ ದುರ್ಗಾ ಡೆವಲಪರ್ಸ್​ ಮತ್ತು ಪ್ರಮೋಟರ್ಸ್​, ಶಾಂಭವಿ ಟ್ವಿನ್​ ಸಿಟಿ ಎಲ್​ಎಲ್​ಪಿ, ಶ್ರೀ ದುರ್ಗಾ ಸ್ಪೋರ್ಟ್ಸ್​ ಅಕಾಡಮಿಯ ಚೇರ್ಮನ್​ ವೀರೇಶ ಉಂಡಿ ಅವರು ಬಹುಮಾನ ಪ್ರಾಯೋಜಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಬಯಸುವ ಸಾರ್ವಜನಿಕ ಗಣೇಶ ಉತ್ಸವ ಮಂಡಳಿಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಶುಲ್ಕ 200 ರೂಪಾಯಿ ಇರುತ್ತದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ವಿಜಯವಾಣಿ ದಿನಪತ್ರಿಕೆ, ವಿಆರ್​ಎಲ್​​ ಕಾಂಪ್ಲೆಕ್ಸ್​, ನ್ಯೂ ಕಾಟನ್​ ಮಾರ್ಕೆಟ್​, ಹುಬ್ಬಳ್ಳಿ-580 029. ದೂ.ಸಂ.: 0836-2250931/32.

ಹುಬ್ಬಳಿ​: 88844 32124, 88844 32253, 88844 32660. ಧಾರವಾಡ: 8884432159/ 43/ 66 / 1973 / 1937.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net