ಬೆಂಗಳೂರು ಮೆಟ್ರೋದಲ್ಲಿ ಇಂಜಿನಿಯರ್ಸ್ ನೇಮಕ: ಶೀಘ್ರವೇ ಅರ್ಜಿ ಸಲ್ಲಿಸಿ

namma-metro
Published on

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಿಂದ ಇಂಜಿನಿಯರಿಂಗ್​ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಸ್ಪೀಡ್​ ಪೋಸ್ಟ್​ ಅಥವಾ ಕೊರಿಯರ್​ ಮೂಲಕ ಕಳುಹಿಸತಕ್ಕದ್ದು.

ಹುದ್ದೆಗಳ ವಿವರ: ಅಸಿಸ್ಟೆಂಟ್​ ಎಕ್ಸಿಕ್ಯೂಟಿವ್​ ಇಂಜಿನಿಯರ್​ (ಸೇಫ್ಟಿ ಆ್ಯಂಡ್​ ಹೆಲ್ತ್​)-2, ಅಸಿಸ್ಟೆಂಟ್​ ಇಂಜಿನಿಯರ್​ (ಸೇಫ್ಟಿ ಆ್ಯಂಡ್​ ಹೆಲ್ತ್​)- 4 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

ವಯೋಮಿತಿ: ಅಸಿಸ್ಟೆಂಟ್​ ಎಕ್ಸಿಕ್ಯೂಟಿವ್​ ಇಂಜಿನಿಯರ್​ಗೆ 45 ವರ್ಷ, ಅಸಿಸ್ಟೆಂಟ್​ ಇಂಜಿನಿಯರ್​ಗೆ 40 ವರ್ಷ ನಿಗದಿಪಡಿಸಲಾಗಿದೆ. ಕನಿಷ್ಠ 5ರಿಂದ 8 ವರ್ಷ ವೃತ್ತಿ ಅನುಭವ ಕೇಳಲಾಗಿದೆ.

ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಉನ್ನತ ಪದವಿ ಜತೆಗೆ ಇಂಡಸ್ಟ್ರಿಯಲ್​ನಲ್ಲಿ ಡಿಪ್ಲೊಮಾ ಪದವಿ ಅಥವಾ ಓಶಾ/ನೆಬೋಶ್​/ಸೇಫ್ಟಿ ಮ್ಯಾನೇಜ್​ಮೆಂಟ್​ ವಿಷಯದಲ್ಲಿ ತರಬೇತಿ ಪಡೆದಿರಬೇಕು. ಅಸಿಸ್ಟೆಂಟ್​ ಇಂಜಿನಿಯರ್​ಗೆ ಸಿವಿಲ್​, ಮೆಕ್ಯಾನಿಕ್​ನಲ್ಲಿ ಬಿಇ/ಬಿಟೆಕ್​ ಪದವಿ ಪಡೆದಿರಬೇಕು.

ವೇತನ: ಹುದ್ದೆಗಳಿಗೆ ಕ್ರಮವಾಗಿ 65,000 ರೂ. ಹಾಗೂ 50,000 ರೂ. ಇದೆ.

ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸದ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಮತ್ತು ವೃತ್ತಿ ಅನುಭವ ಆಧರಿಸಿ ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. 3 ವರ್ಷದ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 11.5.2022

ಅಧಿಸೂಚನೆಗೆ: https://bit.ly/3xsWg1k

ಮಾಹಿತಿಗೆ: https://kannada.bmrc.co.in/

ಅರ್ಜಿ ಸಲ್ಲಿಸಬೇಕಾದ ಸ್ಥಳ: General Manager (HR), Bangalore Metro Rail Corporation Limited, III Floor, BMTC Complex, K.H. Road, Shanthinagar, Bengaluru 560 027 560 027

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net