

ಬೆಂಗಳೂರು: ಪ್ರಸಕ್ತ ಬಜೆಟ್ನಲ್ಲಿ ಅನ್ನಭಾಗ್ಯ ಅಕ್ಕಿ ಪ್ರಮಾಣ ಹೆಚ್ಚಿಸಲಾಗಿದ್ದು, ಬಿಪಿಎಲ್ ಕಾರ್ಡ್ದಾರರಿಗೆ ಅನುಕೂಲವಾಗಲಿದೆ. ಏಪ್ರಿಲ್ 1ರಿಂದ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯನಿಗೆ ತಲಾ 6 ಕೆಜಿ ಅಕ್ಕಿ ಸಿಗಲಿದೆ.
ಈ ಹಿಂದೆ ತಲಾ ಒಬ್ಬರಿಗೆ 7 ಕೆಜಿ ಅಕ್ಕಿ ಕೊಡಲಾಗುತ್ತಿತ್ತು. ಆರ್ಥಿಕ ಹೊರೆ ತಗ್ಗಿಸಲು ಒಂದೂವರೆ ವರ್ಷದ ಹಿಂದೆ 2 ಕೆಜಿ ಅಕ್ಕಿ ಕಡಿತಗೊಳಿಸಿದ್ದ ತಲಾ ಒಬ್ಬರಿಗೆ 5 ಕೆಜಿ ಅನ್ನಭಾಗ್ಯ ಅಕ್ಕಿ ಕೊಡುತ್ತಿತ್ತು. ಇದೀಗ ರಾಜ್ಯ ಸರ್ಕಾರ ಬಜೆಟ್ನಲ್ಲಿ 1 ಕೆಜಿ ಅಕ್ಕಿ ಹೆಚ್ಚಿಸಿದೆ.