

ಬೆಂಗಳೂರು: ಕೋಣನಕುಂಟೆ ಬಳಿಯ ವಾಜರಹಳ್ಳಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ 'ನಮ್ಮಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋ ಖ್ಯಾತಿಯ ಸಮನ್ವಿ ಅಂತ್ಯಕ್ರಿಯೆ ಬನಶಂಕರಿ ಚಿತಾಗಾರದಲ್ಲಿ ಶುಕ್ರವಾರ ನೆರವೇರಿತು.
ಬಣಜಿಗ ಸಂಪ್ರದಾಯದಂತೆ ಶ್ರೀ ಋಷಿ ಕುಮಾರ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಮನ್ವಿ ಅಂತ್ಯಸಂಸ್ಕಾರ ನೆರವೇರಿತು. ಸಮನ್ವಿ ತಾಯಿ ಅಮೃತಾ ನಾಯ್ಡು, ತಂದೆ ಸೇರಿ ಕುಟುಂಬಸ್ಥರು, ಕಿರುತೆರೆ ಸೆಲೆಬ್ರಿಟಿಗಳ ಆಕ್ರಂದ ಮುಗಿಲು ಮುಟ್ಟಿತ್ತು. ಅಪಘಾತದಲ್ಲಿ ಗಾಯಗೊಂಡ ಅಮೃತಾ ನಾಯ್ಡು ಮಗಳ ಶವದ ಮುಂದೆ ಕುಳಿತು ಬಿಕ್ಕಿಬಿಕ್ಕಿ ಅಳುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು. ಅತ್ತ ಸಮನ್ವಿ ತಂದೆ, ಮಗಳ ಶವ ಹಿಡಿದು 'ಸಮನ್ವಿ ಎದ್ದೇಳವ್ವಾ... ಪ್ಲೀಸ್ ಎದ್ದೇಳವ್ವಾ' ಎನ್ನುತ್ತಾ ಮಗಳ ಹಣೆಗೆ ಮುತ್ತಿಟ್ಟು ಕಣ್ಣೀರಿಟ್ಟರು.