

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಗುತ್ತಿಗೆ ಆಧಾರದಲ್ಲಿ 5 ವಕೀಲ ಹುದ್ದೆಗೆ ಬೆಂಗಳೂರು ಮತ್ತು ಧಾರವಾಡ ನ್ಯಾಯಾಲಯದಲ್ಲಿ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಸೀನಿಯರ್ ಪ್ಯಾನಲ್ ಅಡ್ವೊಕೇಟ್-2 ಹಾಗೂ ಜೂನಿಯರ್ ಪ್ಯಾನಲ್ ಅಡ್ವೊಕೇಟ್-3 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಎರಡೂ ಹುದ್ದೆಗಳಿಗೆ 7ರಿಂದ 12 ವರ್ಷ ವೃತ್ತಿ ಅನುಭವ ಕೇಳಲಾಗಿದೆ. ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪದವಿ/ಎಲ್ಎಲ್ಬಿ ಪದವಿ ಪಡೆದಿರಬೇಕು. 11 ತಿಂಗಳ ಅವಧಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಕಾರ್ಯಕ್ಷಮತೆ ಆಧರಿಸಿ ಅವಧಿ ವಿಸ್ತರಣೆ ಆಗಲಿದೆ.
ವೇತನ: ಸೀನಿಯರ್ ವಕೀಲರಿಗೆ 50,000 ರೂ. ಮಾಸಿಕ ವೇತನದೊಂದಿಗೆ 5000 ರೂ. ಭತ್ಯೆ, ಜೂನಿಯರ್ ವಕೀಲರಿಗೆ 40,000 ರೂ.ನೊಂದಿಗೆ 5000 ರೂ. ಭತ್ಯೆ ಇರಲಿದೆ. ಕಾನೂನು ಅಧಿಕಾರಿಗಳು ಹೇಳುವ ಎಲ್ಲ ನಿಯಮಗಳನ್ನು ಕ್ರಮಬದ್ಧವಾಗಿ ಪಾಲಿಸಬೇಕು.
ಅರ್ಜಿ ಸಲ್ಲಿಕೆ: ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 25.4.2022 ರೊಳಗೆ ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು. ಶೈಕ್ಷಣಿಕ ಅರ್ಹತೆ, ವೃತ್ತಿ ಅನುಭವದ ಆಧಾರದ ಮೇಲೆ ಕೌನ್ಸಿಲ್, ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಸಂದರ್ಶನಕ್ಕೆ ಹಾಜರಾಗಲು ಯಾವುದೇ ಭತ್ಯೆ ಇರುವುದಿಲ್ಲ. ಆಯ್ಕೆಯಾದ ಅಭ್ಯರ್ಥಿಗಳು 100 ರೂ. ಸ್ಟಾಂಪ್ ಪೇಪರ್ನಲ್ಲಿ ಅಗ್ರಿಮೆಂಟ್ ಮಾಡಿಸಬೇಕು.
ಅಧಿಸೂಚನೆಗೆ: https://bit.ly/3xpl764 ನೋಡಬಹುದು.