ಬೆಂಗಳೂರಲ್ಲಿ ಮಟಮಟ ಮಧ್ಯಾಹ್ನವೇ ವಕೀಲನ ಪತ್ನಿ ಆತ್ಮಹತ್ಯೆ

New Project (6)
Published on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ವಕೀಲರೊಬ್ಬರ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.

ವಕೀಲ ರಾಜೇಶ್ ಅವರ ಪತ್ನಿ ನಿತ್ಯಶ್ರೀ (25) ಮೃತ ದುರ್ದೈವಿ. ಮಂಡ್ಯ ಜಿಲ್ಲೆ ಪಾಂಡವಪುರ ಮೂಲದ ನಿತ್ಯಶ್ರೀ ಜತೆ 2019ರಲ್ಲಿ ರಾಜೇಶ್​ ಮದುವೆ ಆಗಿದ್ದರು. ದಂಪತಿಗೆ ಒಂದು ವರ್ಷದ ಹೆಣ್ಣು ಮಗು ಇದೆ. ಮಗು ಜತೆ ದಂಪತಿ ಬೆಂಗಳೂರಿನ ದ್ವಾರಕಾನಗರದ ಕೃಷ್ಣ ಟೆಂಪಲ್ ಬಳಿ ಮನೆಯೊಂದರಲ್ಲಿ ವಾಸವಿದ್ದರು. ರಾಜೇಶ್ ಲೀಗಲ್ ಅಡ್ವೈಸರ್ ಆಗಿದ್ದರು.

ಶುಕ್ರವಾರ ಮಧ್ಯಾಹ್ನ 12:30ರ ಸುಮಾರಿಗೆ ಮನೆಯಲ್ಲಿ ಫ್ಯಾನಿಗೆ ನೇಣುಬಿಗಿದುಕೊಂಡು ನಿತ್ಯಶ್ರೀ ಮೃತಪಟ್ಟಿದ್ದಾರೆ. ಕೌಟುಂಬಿಕ ಕಲಹದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಗಿರಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net