ಸಾವಿನಲ್ಲೂ ಸಾರ್ಥಕತೆ ಮೆರೆದ ಆಚಾರ್ಯ ಪಾಠ ಶಾಲೆ ನಿವೃತ್ತ ಶಿಕ್ಷಕಿ ಬಿ.ಜಿ.ಕುಸುಮಾ

b g kusuma
Published on

ಬೆಂಗಳೂರು: ಎನ್.ಆರ್. ಕಾಲನಿಯಲ್ಲಿರುವ ಆಚಾರ್ಯ ಪಾಠ ಶಾಲೆಯ ನಿವೃತ್ತ ಶಿಕ್ಷಕಿ ಬಿ.ಜಿ.ಕುಸುಮಾ (89) ಸೋಮವಾರ ಬೆಳಗ್ಗೆ ಅನಾರೋಗ್ಯದಿಂದ ನಿಧನರಾದರು. ಸಾವಿನ ಬಳಿಕ ಹಲವರ ಬಾಳಿಗೆ ಬೆಳಕಾಗಿದ್ದಾರೆ.

ವೈಜ್ಞಾನಿಕ ಮನೋಭಾವ ಪ್ರಸಾರದಲ್ಲಿ ಆಸಕ್ತರಾಗಿದ್ದ ಕುಸುಮಾ ಅವರು ಡಾ.ಎಚ್.ನರಸಿಂಹಯ್ಯ ಅವರ ಮಾರ್ಗದರ್ಶನದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ "ಬೇಸಿಗೆ ವಿಜ್ಞಾನ ಶಿಬಿರ"ಗಳನ್ನು ಸತತ 26 ವರ್ಷ ನಡೆಸಿದ್ದರು.

ವಿಜ್ಞಾನ ಮತ್ತು ಮಕ್ಕಳ ಸಾಹಿತ್ಯದಲ್ಲಿ ಪುಸ್ತಕಗಳನ್ನು ಬರೆದಿದ್ದ ಅವರು ಗಮಕ ಕಲೆಯಲ್ಲಿ ವ್ಯಾಖ್ಯಾನಕಾರ್ತಿಯೂ ಆಗಿದ್ದರು. ತಮ್ಮ ಸಾಮಾಜಿಕ ಸೇವಾ ಟ್ರಸ್ಟ್ ಮೂಲಕ ಹಲವು ವಿದ್ಯಾರ್ಥಿಗಳು ಮತ್ತು ಬಡಜನರಿಗೆ ನೆರವು ನೀಡಿದ್ದರು.

ನಾನು ಸತ್ತ ಬಳಿಕ ನೇತ್ರದಾನ ಮತ್ತು ದೇಹದಾನ ಮಾಡಿ ಎಂದು ಕುಸುಮಾ ಅವರು ಬದುಕಿದ್ದಾಗಲೇ ಹೇಳಿದ್ದರು. ಅವರ ಅಪೇಕ್ಷೆಯಂತೆ ಅವರ ಕಣ್ಣು ಮತ್ತು ದೇಹದಾನ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net