ಆದಿಚುಂಚನಗಿರಿ ಕ್ಷೇತ್ರದಲ್ಲಿ ದೇವರ ದರ್ಶನ ಪಡೆದು ವಾಪಸ್​ ಬರುತ್ತಿದ್ದ ಇಬ್ಬರ ಪ್ರಾಣ ಹೊತ್ತೊಯ್ದ ಜವರಾಯ!

accident
Published on

ಮಂಡ್ಯ: ಆದಿಚುಂಚನಗಿರಿ ಕ್ಷೇತ್ರದ ಶ್ರೀ ಕಾಲಬೈರವ ಸ್ವಾಮಿ ದರ್ಶನ ಪಡೆದು ವಾಪಸ್​ ಹೋಗುತ್ತಿದ್ದವರ ಮೇಲೆ ಕ್ಯಾಂಟರ್​ ರೂಪದಲ್ಲಿ ಬಂದ ಜವರಾಯ ಅಟ್ಟಹಾಸ ಮೆರೆದಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಯೋಗೇಶ್ (30) ಹಾಗೂ ಬೇಬಿ (18) ಮೃತ ದುರ್ದೈವಿಗಳು. ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಅಗ್ರಹಾರ ಬಾಚಹಳ್ಳಿಯ ಜಯರಾಮೇಗೌಡ ಅವರ ಕುಟುಂಬ ದೇವರ ದರ್ಶನಕ್ಕಾಗಿ ಟಾಟಾ ಏಸ್​ನಲ್ಲಿ ಚುಂಚನಗಿರಿಗೆ ತೆರಳಿತ್ತು.

ದೇವರ ದರ್ಶನ‌ ಮುಗಿಸಿ ವಾಪಸ್ ಬರುವಾಗ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬೆಳ್ಳೂರು ಕ್ರಾಸ್ ಬಳಿ ಟಾಟಾ ಏಸ್​ ಮತ್ತು ಕ್ಯಾಂಟರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಟಾಟಾ ಏಸ್​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಚಾಲಕ ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ಳೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net