ಚುನಾವಣೆಗೆ ನಿಲ್ಲಲು ಸಿದ್ಧತೆಯಲ್ಲಿದ್ದ ಸಿಪಿಐ ಉದಯರವಿಗೆ ಶಾಕ್​: ಅತ್ತೆ-ಗುರುಗಳ ಮನೆ ಮೇಲೆ ಎಸಿಬಿ ದಾಳಿ

acb
Published on

ರಾಯಚೂರು: ಇಂದು ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ 80 ಕಡೆಗಳಲ್ಲಿ 300 ಅಧಿಕಾರಿಗಳ ತಂಡ 21 ಭ್ರಷ್ಟ ಅಧಿಕಾರಿಗಳ ಮನೆಯ ಮೇಲೆ ದಾಳಿ ಮಾಡಿದೆ. ಈ ಪೈಕಿ ಬೆಂಗಳೂರಿನ ಗುಪ್ತಚರ ವಿಭಾಗದ ಸಿಪಿಐ ಉದಯರವಿ ಅವರ ಸಬಂಧಿಕರ ಮನೆಗಳ ಮೇಲೂ ದಾಳಿಯಾಗಿದೆ.

ಉದಯರವಿ ಮೂಲತಃ ರಾಯಚೂರು ಜಿಲ್ಲೆಯ ಆಶಿಹಾಳ ತಾಂಡಾದವರು. ರಾಯಚೂರು ಜಿಲ್ಲೆಯ ಮುದಗಲ್​ನಲ್ಲಿ ಉದಯರವಿ ಅವರ ಅತ್ತೆ ಗಿರಿಜಮ್ಮ ಹಾಗೂ ಗುರುಗಳಾದ ಡಾ.ಅಯ್ಯಪ್ಪ ಮನೆ ಮೇಲೆ ದಾಳಿ ಮಾಡಿರುವ ಎಸಿಬಿ ಅಧಿಕಾರಿಗಳು, ಮಹತ್ವದ ದಾಖಲೆಗಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಕನಕಗಿರಿ ವಿಧಾನಸಭೆ ಕ್ಷೇತ್ರದಿಂದ ಮುಂದಿನ ಬಾರಿ ಚುನಾವಣೆಗೆ ನಿಲ್ಲಲು ಉದಯರವಿ ಸಿದ್ಧತೆಯಲ್ಲಿದ್ದರು.

ಎಸಿಬಿ ದಾಳಿಗೆ ಒಳಗಾದ ಅಧಿಕಾರಿಗಳ ವಿವರಗಳು ಈ ಕೆಳಗಿನಂತಿವೆ

1. ಭೀಮಾರಾವ್ ವೈ. ಪವಾರ್ (ಸೂಪರಿಂಟೆಂಡೆಂಟ್ ಆಫ್ ಇಂಜಿನಿಯರ್, ಬೆಳಗಾವಿ)

2. ಹರೀಶ್ (ಸಹಾಯಕ ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ಉಡುಪಿ)

3. ರಾಮಕೃಷ್ಣ ಎಚ್.ವಿ. (ಎಇಇ, ಸಣ್ಣ ನೀರಾವರಿ, ಹಾಸನ)

4.ರಾಜೀವ್ ಪುರಸಯ್ಯ ನಾಯಕ್ (ಸಹಾಯಕ ಇಂಜಿನಿಯರ್, ಪಿಡಬ್ಲ್ಯುಡಿ ಇಲಾಖೆ, ಕಾರವಾರ)

5. ಬಿ.ಆರ್. ಬೋಪಯ್ಯ (ಜೂನಿಯರ್ ಇಂಜಿನಿಯರ್, ಪೊನ್ನಂಪೇಟೆ ಜಿಲ್ಲಾ ಪಂಚಾಯತ್)

6. ಮಧುಸೂಧನ್ (ಜಿಲ್ಲಾ ನೋಂದಣಾಧಿಕಾರಿ, IGR ಕಚೇರಿ, ಬೆಳಗಾವಿ)

7. ಪರಮೇಶ್ವರಪ್ಪ (ಸಹಾಯಕ ಇಂಜಿನಿಯರ್, ಸಣ್ಣ ನೀರಾವರಿ, ಹೂವಿನಹಡಗಲಿ)

8. ಯೆಲ್ಲಪ್ಪ ಎನ್. ಪಡಸಾಲಿ (RTO, ಬಾಗಲಕೋಟೆ)

9. ಶಂಕರಪ್ಪ ನಾಗಪ್ಪ ಗೋಗಿ ( ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ, ಬಾಗಲಕೋಟೆ)

10. ಪ್ರದೀಪ್ ಎಸ್. ಆಲೂರ್ ( ಪಂಚಾಯತ್ ಗ್ರೇಡ್-2 ಕಾರ್ಯದರ್ಶಿ, RDPR, ಗದಗ)

11. ಸಿದ್ದಪ್ಪ ಟಿ. (ಉಪ ಮುಖ್ಯ ವಿದ್ಯುತ್ ಅಧಿಕಾರಿ, ಬೆಂಗಳೂರು)

12. ತಿಪ್ಪಣ್ಣ ಪಿ. ಸಿರಸಗಿ (ಜಿಲ್ಲಾ ಕಾರ್ಯಕ್ರಮಾಧಿಕಾರಿ ಬೀದರ್)

13. ಮೃತುಂಜಯ ಚೆನ್ನಬಸಯ್ಯ ತಿರಾಣಿ ( ಸಹಾಯಕ ಕಂಟ್ರೋಲರ್, ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್)

14. ಮೋಹನ್ ಕುಮಾರ್ (ಕಾರ್ಯನಿರ್ವಾಹಕ ಇಂಜಿನಿಯರ್, ನೀರಾವರಿ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲೆ)

15. ಶ್ರೀಧರ್ (ಜಿಲ್ಲಾ ನೋಂದಣಾಧಿಕಾರಿ, ಕಾರವಾರ)

16. ಮಂಜುನಾಥ್ ಜಿ (ನಿವೃತ್ತ ಇಇ. PWD)

17. ಶಿವಲಿಂಗಯ್ಯ (ಸಿ ಗ್ರೂಪ್​, ಬಿಡಿಎ)

18. ಉದಯರವಿ (ಪೊಲೀಸ್ ಇನ್ಸ್‌ಪೆಕ್ಟರ್, ಕೊಪ್ಪಳ)

19. ಬಿ.ಜಿ.ತಿಮ್ಮಯ್ಯ (ಕೇಸ್ ವರ್ಕರ್, ಕಡೂರು ಪುರಸಭೆ)

20. ಚಂದ್ರಪ್ಪ ಸಿ. ಹೋಳೇಕರ್ (UTP ಕಚೇರಿ, ರಾಣೆಬೆನ್ನೂರು)

21. ಜನಾರ್ದನ್ (ನಿವೃತ್ತ ರಿಜಿಸ್ಟ್ರಾರ್ ಮೌಲ್ಯಮಾಪನಗಳು (ಭೂಮಿ), ಬೆಂಗಳೂರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net