3 ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಪ್ರಾಣಬಿಟ್ಟ ತಾಯಿ! ಕಂದಮ್ಮನೂ ಬದುಕಲಿಲ್ಲ...

lake
Published on

ಚಿಕ್ಕೋಡಿ: ಪ್ರೀತಿಯಿಂದ ಸಾಕಿದ್ದ ಮೂರು ವರ್ಷದ ಕಂದಮ್ಮನನ್ನು ಬಾವಿಗೆ ಎಸೆದು, ಬಳಿಕ ತಾಯಿಯೂ ಬಾವಿಗೆ ಧುಮುಕಿ ಪ್ರಾಣ ಬಿಟ್ಟ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ದೇವಾಪುರಹಟ್ಟಿ ಗ್ರಾಮದಲ್ಲಿ ಸಂಭವಿಸಿದೆ.

ರುಕ್ಮವ್ವ ಭರಮಾ ಹಳಿಂಗಳಿ(34) ಮತ್ತು ಇವರ ಪುತ್ರಿ ಚಿನ್ನವ್ವ ಹಳಿಂಗಳಿ(3) ಮೃತ ದುರ್ದೈವಿಗಳು. ತಾಯಿ- ಮಗುವಿನ ಸಾವಿನ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಕೊಲೆಯೋ? ಅಥವಾ ಆತ್ಮಹತ್ಯೆಯೋ? ಎಂಬುದು ಪೊಲೀಸ್​ ತನಿಖೆ ಬಳಿಕ ಬಯಲಾಗಬೇಕಿದೆ. ರಾಯಬಾಗ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net