6 ವರ್ಷ ಪ್ರಾಯದ ಗಂಡು ಹುಲಿ ಸಾವು

ಚಿತ್ರ 22ಎಸ್ ಡಿ ಪಿ 2.
ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಸೋಮವಾರ ಮೃತ ಹುಲಿಯ ಮರಣೋತ್ತರ ಪರೀಕ್ಷೆ ನಡೆಯಿತು. ಎನ್.ಎಚ್.ಜಗನ್ನಾಥ್, ಡಿ.ಎಸ್.ದಯಾನಂದ್, ರಮೇಶ, ಭವಿಷ್ಯ ಕುಮಾರ್, ಬೋಸ್ ಮಾದಪ್ಪ, ತಮ್ಮಯ್ಯ ಇತರರಿದ್ದರು.
Published on

ಸಿದ್ದಾಪುರ: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅನೆಚೌಕೂರು ವನ್ಯಜೀವಿ ವಲಯದ ಗಣಗೂರು ಶಾಖೆಯ ಗಣಗೂರು ಗಸ್ತಿನ ಅರಣ್ಯ ಪ್ರದೇಶದಲ್ಲಿ ಸೋಮವಾರ ಸುಮಾರು ಆರು ವರ್ಷ ಪ್ರಾಯದ ಗಂಡು ಹುಲಿಯೊಂದು ಬೇರೊಂದು ಕಾಡು ಪ್ರಾಣಿಯ ಜೊತೆ ಕಾದಾಟದಿಂದ ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ವಿರಾಜಪೇಟೆ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್.ಜಗನ್ನಾಥ್, ಹುಣಸೂರು ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಿ.ಎಸ್.ದಯಾನಂದ್, ಮುಖ್ಯ ಪಶುವೈದ್ಯಾಧಿಕಾರಿ ರಮೇಶ, ಬಾಳೆಲೆ ಪಶು ವೈದ್ಯಾಧಿಕಾರಿ ಭವಿಷ್ಯಕುಮಾರ್, ರಾಷ್ಟ್ರೀಯ ಹುಲಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯ ಬೋಸ್ ಮಾದಪ್ಪ, ವನ್ಯಜೀವಿ ಮುಖ್ಯ ಪರಿಪಾಲಕ ತಮ್ಮಯ್ಯ ಹಾಗೂ ಸಿಬ್ಬಂದಿ ಮರಣೋತ್ತರ ಪರೀಕ್ಷೆ ವೇಳೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net