6 ಅಡಿ ಉದ್ದದ ನಾಗರಹಾವು ಸೆರೆ

05 HANUR 4
ಮಂಗಲ ಗ್ರಾಮದ ಮನೆಯೊಂದರಲ್ಲಿ ಅಡಗಿದ್ದ ನಾಗರಹಾವನ್ನು ಸ್ನೇಕ್ ಮಧು ಸೆರೆ ಹಿಡಿದರು.
Published on

ಹನೂರು: ತಾಲೂಕಿನ ಮಂಗಲ ಗ್ರಾಮದ ಮನೆಯೊಂದರಲ್ಲಿ ಅಡಗಿದ್ದ ಸುಮಾರು 6 ಅಡಿ ಉದ್ದದ ನಾಗರಹಾವನ್ನು ಗುರುವಾರ ಸಂಜೆ ಅಜ್ಜೀಪುರದ ಸ್ನೇಕ್ ಮಧು ಸೆರೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಗ್ರಾಮದ ಷಣ್ಮುಗ ಅವರ ಮನೆಯ ಕೊಠಡಿಯೊಂದರಲ್ಲಿ ಸಂಜೆ 5 ಗಂಟೆ ವೇಳೆಯಲ್ಲಿ ನಾಗರಹಾವು ಕಾಣಿಸಿಕೊಂಡಿತ್ತು. ಇದರಿಂದ ಭಯಭೀತರಾದ ಕುಟುಂಬಸ್ಥರು ಸ್ನೇಕ್ ಮಧುಗೆ ಕರೆ ಮಾಡಿ ತಿಳಿಸಿದ್ದರು. ಕೂಡಲೇ ಸ್ಥಳಕ್ಕಾಗಮಿಸಿ ಮಧು ಬುಸುಗುಡುತ್ತಿದ್ದ ಹಾವನ್ನು ಸೆರೆ ಹಿಡಿದು ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟರು. ಇದರಿಂದ ಕುಟುಂಬಸ್ಥರು ನಿಟ್ಟುಸಿರು ಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net