

ನರಗುಂದ: ಪಟ್ಟಣ ಹಾಗೂ ತಾಲೂಕಿನ ಕಣಕೀಕೊಪ್ಪ ಗ್ರಾಮದ ಪ್ರತ್ಯೇಕ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದ ಹಾವುಗಳನ್ನು ಗೃಹರಕ್ಷಕ ದಳದ ಸಿಬ್ಬಂದಿ, ಉರಗ ರಕ್ಷಕ ಬಿ.ಆರ್. ಸುರೇಬಾನ ಸೋಮವಾರ ಸೆರೆಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.
ಪಟ್ಟಣದ ದಂಡಾಪುರ ಕುರುಬಗೇರಿ ಓಣಿಯ ಮಲ್ಲಪ್ಪ ತೋರಗಲ್ಲ ಅವರ ನಿರ್ಮಾಣ ಹಂತದ ಮನೆ ಬಳಿಯಿದ್ದ 7 ಅಡಿ ಉದ್ದದ ಕೆರೆ ಹಾವು ಹಾಗೂ ತಾಲೂಕಿನ ಕಣಕೀಕೊಪ್ಪ ಗ್ರಾಮದ ಯಲ್ಲರಡ್ಡಿ ಕೆಂಚರಡ್ಡಿ ಅವರ ಮನೆಯ ದೇವರ ಜಗಲಿ ಮೇಲಿದ್ದ 5.5 ಅಡಿ ಉದ್ದದ ನಾಗರಹಾವನ್ನು ಸುರಕ್ಷಿತವಾಗಿ ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ. ವಿಶ್ವನಾಥ ವಡ್ಡರ ಇದ್ದರು.