ಅ. ೩೧ರಿಂದ ನ. ೩ರ ವರೆಗೆ ಬಿಂಡಿಗ ದೇವಿರಮ್ಮ ದೀಪೋತ್ಸವ

19 ckm 5
ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಡಿಸಿ ಮೀನಾ ನಾಗರಾಜ್ ಅಧ್ಯಕ್ಷತೆಯಲ್ಲಿ ದೇವಿರಮ್ಮ ದೀಪೋತ್ಸವ ಕಾರ್ಯಕ್ರಮದ ಸಿದ್ದತೆಯ ಪೂರ್ವಭಾವಿ ಸಭೆ ನಡೆಯಿತು. ವಿಕ್ರಮ ಅಮಟೆ, ಕೃಷ್ಣಮೂರ್ತಿ, ನಾರಾಯಣರಡ್ಡಿ ಕನಕರಡ್ಡಿ, ದಲ್ಜಿತ್ ಕುಮಾರ್, ಡಾ.ಸುಮಂತ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಇದೇ ಅ. ೩೧ರಿಂದ ನ. ೩ರವರೆಗೆ ನಡೆಯುವ ಬಿಂಡಿಗ ದೇವಿರಮ್ಮ ದೀಪೋತ್ಸವ ಕಾರ್ಯಕ್ರಮಕ್ಕೆ ಅಗತ್ಯ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಡಿಸಿ ಮೀನಾ ನಾಗರಾಜ್ ಅಧ್ಯಕ್ಷತೆಯಲ್ಲಿ ನಡೆದ ದೇವಿರಮ್ಮ ದೀಪೋತ್ಸವ ಕಾರ್ಯಕ್ರಮದ ಸಿದ್ದತೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಅ. ೩೦ರಂದು ರಾತ್ರಿ ಬೆಟ್ಟ ಹತ್ತುವ ಭಕ್ತಾದಿಗಳಿಗೆ ಕೆಲವು ಮಾರ್ಗಸೂಚಿಗಳನ್ನು ಸೈನ್ ಬೋರ್ಡ್ಗಳ ಮೂಲಕ ಅಗತ್ಯ ಕ್ರಮಗಳನ್ನು ಅನುಸರಿಸಬೇಕು. ಮಳೆ ಇರುವುದರಿಂದ ಜಾಗೂರುಕತೆಯಿಂದ ಭಕ್ತರು ಬೆಟ್ಟ ಏರಬೇಕು. ಅಗತ್ಯವಿದ್ದರೆ ಸ್ವಯಂ ಸೇವಕರ ಸಹಾಯ ಪಡೆದು ಸುರಕ್ಷತೆಯಿಂದ ಬೆಟ್ಟ ಹತ್ತಬೇಕು. ಬರುವ ಭಕ್ತರಿಗೆ ಕೆಎಸ್‌ಆರ್‌ಟಿಸಿ ಬಸ್ಸುಗಳ ವ್ಯವಸ್ಥೆ, ರಕ್ಷಣೆ, ಆರೋಗ್ಯ ಸೇವೆ ಹಾಗೂ ನಿರಂತರ ವಿದ್ಯುತ್ ವ್ಯವಸ್ಥೆ ಮಾಡಿಕೊಳ್ಳಲು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಬರುವ ಭಕ್ತರಿಗೆ ಮೂರು ದಿನಗಳ ಕಾಲ ವ್ಯವಸ್ಥಾಪನಾ ಸಮಿತಿ ಪ್ರಸಾದ, ಕುಡಿಯುವ ನೀರು ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸಿದ್ದತೆ ಮಾಡಿಕೊಳ್ಳಬೇಕು. ಪ್ರತಿ ವರ್ಷದಂತೆ ಈ ಬಾರಿ ಭಕ್ತರು ಹೆಚ್ಚಾಗುವ ಸಾಧ್ಯತೆ ಇದೆ. ಜಾತ್ರೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವುದರಿಂದ ವ್ಯವಸ್ಥಿತವಾಗಿ ಎಲ್ಲ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸಂಬAಧಪಟ್ಟವರಿಗೆ ಸೂಚನೆ ನೀಡಿದರು.
ಜಿಪಂನಿAದ ಪಾಂಗಿAಗ್ ವ್ಯವಸ್ಥೆ ಮುಂಚಿತವಾಗಿ ಆರಂಭಿಸಬೇಕು. ರಸ್ತೆಗಳ ದುರಸ್ತಿ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದರು.
ಎಸ್‌ಪಿ ವಿಕ್ರಮ ಅಮಟೆ ಮಾತನಾಡಿ, ದೇವಾಲಯಕ್ಕೆ ಬರುವ ರಸ್ತೆಗಳ ಇಕ್ಕೆಲಗಳಲ್ಲಿ ಬೆಳೆದಿರುವ ಗಿಡಗಳನ್ನು (ಜಂಗಲ್) ತೆಗೆದು ಸ್ವಚ್ಛತೆ ಮಾಡಿ ಸುಗಮ ವಾಹನ ಸಂಚಾರ ಹಾಗೂ ಪಾರ್ಕಿಂಗ್ ಮಾಡಲು ವ್ಯವಸ್ಥಾಪನಾ ಸಮಿತಿ ಮಾಡಬೇಕು. ಬರುವ ಭಕ್ತರು ಪೊಲೀಸ್ ಜೊತೆಗೆ ಸಹಕರಿಸಬೇಕು. ನಿಗಧಿತ ಸ್ಥಳಗಳಲ್ಲಿ ವಾಹನ ಪಾರ್ಕಿಂಗ್ ಮಾಡಬೇಕು. ಅದಷ್ಟು ಬರುವ ಭಕ್ತರು ಚಿಕ್ಕಮಗಳೂರು ನಗರದಲ್ಲಿ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಬಂದು ದೇವರ ದರ್ಶನ ಮಾಡುವಂತೆ ಸಲಹೆ ನೀಡಿದರು.
ನಗರದ ಹಾಗೂ ದೇವಸ್ಥಾನ ಬಳಿ ನಿಗಧಿಪಡಿಸಿರುವ ಪಾರ್ಕಿಂಗ್ ಜಾಗದಲ್ಲೇ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಬೇಕು. ಬೆಟ್ಟ ಏರುವ ಭಕ್ತರು ತಮ್ಮ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬೆಟ್ಟ ಏರುವುದು ಸೂಕ್ತ. ಮಳೆ ಹೆಚ್ಚಾಗಿರುವ ಕಾರಣ ಯಾವುದೇ ಅವಘಡಗಳಿಗೆ ಅಸ್ಪದ ಆಗದಂತೆ ಭಕ್ತರು ನಿಗಾವಹಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಉಪವಿಭಾಗಾಧಿಕಾರಿ ದಲ್ಜಿತ್ ಕುಮಾರ್, ಎಎಸ್‌ಪಿ ಕೃಷ್ಣಮೂರ್ತಿ, ಡಿವೈಎಸ್‌ಪಿ ಶೈಲೇಂದ್ರ, ತಹಸೀಲ್ದಾರ್ ಡಾ. ಸುಮಂತ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net