ಅ.31 ಭಾರತದ ಪಾಲಿಗೆ ಕರಾಳ ದಿನ

31Kush03
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯಸ್ಮರಣೆ ಪ್ರಯುಕ್ತ ಅವರ ಭಾವಾಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೌನ ಆಚರಿಸಲಾಯಿತು. ವಿ.ಪಿ.ಶಶಿಧರ್, ಚಂದ್ರಕಲಾ, ಮಂಜುನಾಥ್ ಗುಂಡೂರಾವ್, ಜಗದೀಶ್, ಶಿವಶಂಕರ್ ಇದ್ದರು.
Published on

ಕುಶಾಲನಗರ: ಅ.31 ಭಾರತದ ಪಾಲಿಗೆ ಕರಾಳ ದಿನ. ಅಂದು ದೇಶದ ಅಖಂಡತೆ ಏಕತೆಯನ್ನು ನುಚ್ವುನೂರುಗೊಳಿಸಿದ ದಿನ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ತಿಳಿಸಿದರು.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಮಾಜಿ ಪ್ರಧಾನಿ ಇಂದಿರಾಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಾಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ದೇಶ ವಿಭಜಕ ಶಕ್ತಿಗಳ ಅಟ್ಟಹಾಸಕ್ಕೆ ಭಾರತದ ಪ್ರಥಮ ಮಹಿಳಾ ಪ್ರಧಾನ ಮಂತ್ರಿ, ರಾಷ್ಟ್ರದ ಅನೇಕ ಪ್ರಥಮಗಳ ಸೃಷ್ಟಿಗೆ ವಿಶಿಷ್ಟ ಸಾಧನೆ ಮೂಲಕ ಬಾರತದ ಹೆಗ್ಗಳಿಕೆಗೆ ಕಾರಣರಾದ ಶ್ರೇಷ್ಠ ಮಹಿಳೆಯನ್ನು ಕಳೆದುಕೊಂಡದ್ದು ದುರಂತ ಎಂದರು.

ಭೂಪಟದಲ್ಲಿ ಪ್ರತ್ಯೇಕ ಬಾಂಗ್ಲಾದೇಶದ ರಾಷ್ಟ್ರವನ್ನು ಸೃಷ್ಟಿಸಿದ, ಅಣು ಬಾಂಬ್‌ಅನ್ನು ಪ್ರಥಮವಾಗಿ 1975ರಲ್ಲಿ ಸ್ಫೋಟಿಸಿ ಭಾರತದ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದ, ದೇಶದ ಪ್ರಪ್ರಥಮ ಉಪಗ್ರಹ ಆರ್ಯಭಟವನ್ನು ಭೂ ಕಕ್ಷೆಗೆ ಸೇರಿಸಿದ, ಬ್ಯಾಂಕ್‌ಗಳ ರಾಷ್ಟ್ರೀಯಕರಣವನ್ನು ರಾಜವಂಶದ ರಾಜಧನವನ್ನು ರದ್ದುಗೊಳಿಸುವ ಮೂಲಕ ದಿಟ್ಟತನ ಪ್ರದರ್ಶಿಸಿದವರು ಇಂದಿರಾ ಗಾಂಧಿ. ಭಾರತದಲ್ಲಿ ಇಂತಹ ಅನೇಕ ಐತಿಹಾಸಿಕ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಕೊಟ್ಟ ಅವರು ಹುತಾತ್ಮರಾದ ದಿನವನ್ನು ದೇಶಾದ್ಯಂತ ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಇದೇ ವೇಳೆ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಅವರ ಸ್ಮರಣೆ ಮಾಡಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಮಂಜುನಾಥ್ ಗುಂಡೂರಾವ್, ನವೀನ್, ಕಿರಣ್, ನಂಜುಂಡಸ್ವಾಮಿ, ಫಜಲ್ಲುಲಾ ಖಾನ್, ಶೇಖ್ ಕಳಿಮುಲ್ಲಾ ಖಾನ್, ಎಂ.ಕೆ.ದಿನೇಶ್, ಹರೀಶ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net