ದ್ವಿತೀಯ ಪಿಯು ಫಲಿತಾಂಶ: ಶಿಕ್ಷಣ ಸಚಿವರ ತವರು ಜಿಲ್ಲೆ ತುಮಕೂರಿಗೆ 28ನೇ ಸ್ಥಾನ!

bc nagesh
Published on

ತುಮಕೂರು: 2021-22ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಈ ಬಾರಿ ಕಲಾ, ವಾಣಿಜ್ಯ, ವಿಜ್ಞಾನ ಸೇರಿ 3 ವಿಭಾಗದಲ್ಲೂ ರಾಜ್ಯಕ್ಕೆ ಒಟ್ಟಾರೆ ಶೇ.61.88 ಫಲಿತಾಂಶ ಬಂದಿದೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯು ರಾಜ್ಯಕ್ಕೆ ಟಾಪರ್​ ಆಗಿ ಹೊರ ಹೊಮ್ಮಿದರೆ, ಶೈಕ್ಷಣಿಕ ಜಿಲ್ಲೆ, ಶಿಕ್ಷಣ ಸಚಿವರ ತವರು ತುಮಕೂರು ಜಿಲ್ಲೆ 28ನೇ ಸ್ಥಾನಗಳಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯು ಶೇ.88.02 ಫಲಿತಾಂಶ ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್​ ಆಗಿ ಹೊರ ಹೊಮ್ಮಿದರೆ, ತುಮಕೂರು ಜಿಲ್ಲೆ ಶೇ.58.90 ಫಲಿತಾಂಶ ಪಡೆದು 28ನೇ ಸ್ಥಾನದಲ್ಲಿದೆ. ತುಮಕೂರಿನ ವಿದ್ಯಾನಿಧಿ ಕಾಲೇಜಿನ ಸಹನಾ ಟಿ.ಆರ್. ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 2ನೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ತುಮಕೂರು ಜಿಲ್ಲೆಗೆ ದ್ವಿತೀಯ ಪಿಯು ಫಲಿತಾಂಶದಲ್ಲಿ ಲಭಿಸಿದ ಸ್ಥಾನ

2021-22ನೇ ಸಾಲಿನಲ್ಲಿ 28ನೇ ಸ್ಥಾನ

2020-21ನೇ ಸಾಲಿನಲ್ಲಿ 28ನೇ ಸ್ಥಾನ

2019-20ನೇ ಸಾಲಿನಲ್ಲಿ 17ನೇ ಸ್ಥಾನ

2018-20ನೇ ಸಾಲಿನಲ್ಲಿ 21ನೇ ಸ್ಥಾನ

2017-18ನೇ ಸಾಲಿನಲ್ಲಿ 22ನೇ ಸ್ಥಾನ

2016-17ನೇ ಸಾಲಿನಲ್ಲಿ 23ನೇ ಸ್ಥಾನ

2015-16ನೇ ಸಾಲಿನಲ್ಲಿ 24ನೇ ಸ್ಥಾನ

ತುಮಕೂರಿನ ವಿದ್ಯಾನಿಧಿ ಕಾಲೇಜಿನ ಸಹನಾ ಟಿ.ಆರ್. ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 2ನೇ ಟಾಪರ್.
ತುಮಕೂರಿನ ವಿದ್ಯಾನಿಧಿ ಕಾಲೇಜಿನ ಸಹನಾ ಟಿ.ಆರ್. ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 2ನೇ ಟಾಪರ್.

https://pue.karnataka.gov.in/ ವೆಬ್​ಸೈಟ್​ನಲ್ಲಿ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಬಹುದು. ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿರುವ ಮೊಬೈಲ್​ ಸಂಖ್ಯೆಗೂ ಫಲಿತಾಂಶದ ಸಂದೇಶ ಕಳುಹಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net