2ಕೆಜಿ ಗಡ್ಡೆ ಹೊರ ತೆಗೆದ ಚಿಟಗುಪ್ಪಿ ಆಸ್ಪತ್ರೆ ವೈದ್ಯರು

h15-dr.sridhar dandappanavar
Published on

ಹುಬ್ಬಳ್ಳಿ: ಮಹಿಳೆಯ ಹೊಟ್ಟೆಯೊಳಗಿದ್ದ 2.2 ಕೆಜಿ ಗಡ್ಡೆಯನ್ನು ಹೊರ ತೆಗೆಯುವಲ್ಲಿ ಇಲ್ಲಿಯ ಪಾಲಿಕೆ ಆವರಣದಲ್ಲಿರುವ ಚಿಟಗುಪ್ಪಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರದ 42 ವಯಸ್ಸಿನ ಮಹಿಳೆಯು ಹೊಟ್ಟೆ, ರಕ್ತಹೀನತೆ ಹಾಗೂ ಸುಸ್ತುನಿಂದ ಬಳಲುತ್ತಿದ್ದರು. ತೀವ್ರ ತರಹದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ ಬಳಿ ತಮಗಾಗುತ್ತಿರುವ ನೋಡು ತೋಡಿಕೊಂಡಿದ್ದರು. ಚಿಕಿತ್ಸೆಗೆ ದಾಖಲಾಗುವಂತೆ ವೈದ್ಯರು ಸೂಚಿಸಿದ್ದರು.
ಅಂತೆಯೇ ಸೋಮವಾರ ಚಿಕಿತ್ಸೆಗೆ ಬಂದಿದ್ದ ಮಹಿಳೆಯನ್ನು ತಪಾಸಣೆಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ 2.2 ಕೆಜಿ ತೂಕದ ಗಡ್ಡೆ (ಫೈಬ್ರಾಯಿಡ್ ಯುಟ್ರಸ್) ಇರುವುದು ಪತ್ತೆಯಾಗಿತ್ತು. 2 ಬಾರಿ ಸಿಜರಿನ್ ಆಗಿದ್ದು, ಮೊದಲೇ ರಕ್ತಹೀನತೆಯಿಂದ ಬಳಲುತ್ತಿದ್ದ ಮಹಿಳೆಗೆ ಶಸ್ತ್ರ ಚಿಕಿತ್ಸೆ ನೆರವೇರಿಸುವುದು ಅನಿವಾರ್ಯವೆಂದು ವೈದ್ಯರು ಅರಿತರು. ಲ್ಯಾಪ್ರೊಸ್ಕೊಪಿಕ್ ಶಸ್ತ್ರಚಿಕಿತ್ಸೆ ನಡೆಸಲು ತೀರ್ಮಾನಿಸಿದರು. ಮಂಗಳವಾರ ಬೆಳಗ್ಗೆ ಶುಶ್ರೂಷಾಧಿಕಾರಿಗಳಾದ ರಾಮು, ಮಂಜುಳಾ, ಪೂಜಾ, ಸುನೀಲ್, ತೇಜಸ್ವಿನಿ ಸಹಾಯದೊಂದಿಗೆ ಡಾ. ಶ್ರೀಧರ ದಂಡಪ್ಪನವರು ಶಸ್ತ್ರ ಚಿಕಿತ್ಸೆ ನೆರವೇರಿಸಿದರು.
‘ಈಗ ಮಹಿಳೆಯು ಆರೋಗ್ಯದಿಂದ ಇದ್ದಾರೆ. ನಾಳೆ ಅಥವಾ ನಾಡಿದ್ದು ಡಿಸ್ಜಾರ್ಜ್ ಮಾಡಲಾಗುವುದು. ಸರ್ಕಾರಿ ಆಸ್ಪತ್ರೆಯಲ್ಲಿ ಈ ರೀತಿಯ ಅತಿ ದೊಡ್ಡ ಗಡ್ಡೆ ತೆಗೆದಿರುವುದು ಪ್ರಥಮ ಎಂಬುದು ನನ್ನ ಅಭಿಪ್ರಾಯ’ ಎನ್ನುತ್ತಾರೆ ಚಿಟಗುಪ್ಪಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net