ಅ.20 ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ

14sri-1 (3)
ಶ್ರೀರಾಘವೇಂದ್ರ ಸ್ವಾಮಿ.
Published on

ಶೃಂಗೇರಿ: ಕಲ್ಕಟ್ಟೆ ಶ್ರೀರಾಘವೇಂದ್ರ ಬೃಂದಾವನ ಸೇವಾ ಸಮಿತಿಯಿಂದ ಅ.20 ರಿಂದ 22ರವರೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ನಡೆಯಲಿದೆ.
ಅ.20ರ ಮಂಗಳವಾರ ಪೂರ್ವಾರಾಧನೆ ಪ್ರಯುಕ್ತ ಬೆಳಗ್ಗೆ 8ಗಂಟೆಯಿಂದ ಶ್ರೀರಾಮತಾರಕ ಹೋಮ, ಮಹಾ ಮಂಗಳಾರತಿ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಸಾರ್ವಜನಿಕರಿಗೆ ರಾಮಾಯಣ, ಮಹಾ ಭಾರತ ರಸಪ್ರಶ್ನೆ ನೆರವೇರಲಿದೆ. ಸಂಜೆ 6.30ಕ್ಕೆ ಗುರುರಾಯರಿಗೆ ವಿಶೇಷ ಪೂಜೆ, ಭಜನಾ ಕಾರ್ಯಕ್ರಮ, ಮಹಾ ಮಂಗಳಾರತಿ,ಅನ್ನಸಂತರ್ಪಣೆ ಜರುಗಲಿದೆ.
ಅ.21ರಂದು ಬೆಳಗ್ಗೆ 6.30ರಿಂದ ಆರಾಧನಾ ಸಂಬಂಧಿತ ಕಾರ್ಯಕ್ರಮಗಳು ನಡೆಯಲಿದ್ದು 7ಗಂಟೆಗೆ ಅಂಜನೇಯ ಮೂಲಮಂತ್ರ ಹೋಮ, 8ಗಂಟೆಯಿಂದ ಸರ್ವ ಸೇವೆಯ ಸಂಕಲ್ಪ ಪ್ರಾರಂಭ ಹಾಗೂ 9.30ರಿಂದ ಪಂಚಾಮೃತ ಅಭಿಷೇಕ, ಬೆಳಗ್ಗೆ 10.30 ರಿಂದ 12ಗಂಟೆವರೆಗೆ ಶೃಂಗೇರಿ ಶ್ರೀವಿನಾಯಕ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ ಹಾಗೂ ಮಹಾ ಮಂಗಳಾರತಿ ಜರುಗಲಿದೆ.
ಅ.22ರಂದು ಬೆಳಗ್ಗೆ 10ಗಂಟೆಗೆ ಪವಮಾನ ಅಭಿಷೇಕ, ಮಹಾ ಮಂಗಳಾರತಿ ಬಳಿಕ ಮಧ್ಯಾಹ್ನ 3.30ರಿಂದ ಹೊನ್ನವಳ್ಳಿ ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾಸಂಘದಿಂದ ತಾಳಮದ್ದಲೆ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net