ಮೈಸೂರು: ಈಗ ಸುರಿಯುತ್ತಿರುವ ಮಹಾಮಳೆಗೆ ಲಿಂಗಾಂಬುದಿ ಪಾಳ್ಯದ ಬಳಿಯ ರಿಂಗ್ ರಸ್ತೆಯಲ್ಲಿ ಸುಮಾರು 20 ಅಡಿ ಹಾಳದ ಗುಂಡಿ ಪತ್ತೆಯಾಗಿದೆ.
ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿ ಸಾಗಿದರೆ ಲಿಂಗಾಂಬುದಿ ಪಾಳ್ಯದ ಮೈಸೂರು ವಿಶ್ವವಿದ್ಯಾನಿಲಯ ಬಡಾವಣೆ ಬಳಿಕಯ ಮಾರಮ್ಮನ ದೇವಾಲಯದ ಬಳಿ ಬಾವಿಯನ್ನು ಹೋಲುವ ಗುಂಡಿ ರಸ್ತೆ ಮಧ್ಯೆ ಕಂಡು ಬಂದಿದೆ. ಶುಕ್ರವಾರ ತಡ ರಾತ್ರಿ ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು, ಪೊಲೀಸರ ನೆರವಿನಿಂದ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ಸಂಚಾರ ನಿರ್ಬಂಧಿಸಿಸುವ ಮೂಲಕ ಅನಾಹುತ ತಪ್ಪಿಸಿದ್ದಾರೆ. ವಾಹನಗಳನ್ನು ಮತ್ತೊಂದು ಬದಿಯ ರಸ್ತೆಯಲ್ಲಿ ಕಳುಹಿಸಲಾಯಿತು.
ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಬ್ಯಾಂಕ್ ನೆರವಿನಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು 15 ವರ್ಷಗಳ ಹಿಂದೆ ಈ ವರ್ತುಲ ರಸ್ತೆಯನ್ನು ನಿರ್ಮಾಣ ಮಾಡಿತ್ತು. ರಸ್ತೆ ನಿರ್ಮಾಣ ಸಮಯದಲ್ಲಿ ಕಂಡು ಬಾರದ ಈ ಗುಂಡಿ ಈಗ ಮಳೆಗೆ ಕಂಡು ಬಂದಿದೆ. ಇತ್ತೀಚೆಗಷ್ಟೇ ರಿಂಗ್ ರಸ್ತೆ ಹಾಗೂ ಸರ್ವಿಸ್ ರಸ್ತೆಗೆ ಡಾಂಬರು ಹಾಕಲಾಗಿತ್ತು.