ಅ.19 ಮತ್ತು 20 ರಂದು ದಿ ಬಿಗ್ ಟೆಕ್ ಶೋ

DSC_8287
Published on

ಮೈಸೂರು: ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ವತಿಯಿಂದ ಅ.19 ಮತ್ತು 20ರಂದು ಎರಡು ದಿನಗಳ ದಿ ಬಿಗ್ ಟೆಕ್ ಶೋ-2022ರ 2ನೇ ಆವೃತ್ತಿಯನ್ನು ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಇಲ್ಲಿ ಮೈಸೂರು ಕೈಗಾರಿಕಾ ವಲಯದ ಸಾಧನೆ ಅನಾವರಣಗೊಳ್ಳಲಿದೆ ಎಂದು ಕೆಡಿಇಎಂ ಸಿಇಒ ಸಂಜೀವ್ ಗುಪ್ತಾ ತಿಳಿಸಿದರು.


ಇಎಸ್‌ಡಿಎಂ ಮತ್ತು ಸೈಬರ್ ಸೆಕ್ಯೂರಿಟಿ ಒಳಗೊಂಡ ಸಮಿಕಾನ್‌ಗಾಗಿ ಮೈಸೂರು ನೂತನ ಜಾಗತಿಕ ಕೇಂದ್ರವಾಗಿರುವುದಕ್ಕೆ ಬಿಗ್ ಟೆಕ್ ಶೋ 2ನೇ ಆವೃತ್ತಿ ಸಾಕ್ಷಿಯಾಗಲಿದೆ. ಕೆಡಿಇಎಂ ಮತ್ತು ಟಿಐಇ ಹೂಡಿಕೆದಾರರಿಂದ ಉದ್ಯಮ, ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲು ಹಾಗೂ ನೆರವು ನೀಡುವ ಗುರಿಯನ್ನು ಹೊಂದಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.


ರ‌್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಕರ್ನಾಟಕ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಭಾಗವಹಿಸಲಿದ್ದಾರೆ ಎಂದರು.


ಅ.19ರಂದು ಸೈಬರ್ ವರ್ಸ್ ಫೌಂಡೇಷನ್ ಅಧ್ಯಕ್ಷೆ ತ್ರಿಷಿಕಾ ಕುಮಾರಿ ಒಡೆಯರ್ ಅವರು ವುಮೆನ್ ಅಟ್ ವರ್ಕ್ ಕುರಿತು ಪ್ರಧಾನ ಭಾಷಣ ಮಾಡಲಿದ್ದಾರೆ. ಸಂಜೆ 5 ಗಂಟೆಗೆ ನಡೆಯಲಿರುವ ಸಿಇಒ ರೌಂಡ್ ಟೇಬಲ್-ಕ್ಲಸ್ಟರ್‌ನಲ್ಲಿ ಉದ್ಯಮಿಗಳು 2026ರ ಮೈಸೂರು ವಿಷನ್‌ಗೆ ಅನುಗುಣವಾಗಿ ಚಿಂತನ ಮಂಥನ ನಡೆಸಲಿದ್ದಾರೆ.
ಅ.20ರಂದು ಬೆಳಗ್ಗೆ 6 ಗಂಟೆಗೆ ನಡೆಯಲಿರುವ ವಾಕಥಾನ್‌ನಲ್ಲಿ ಉದ್ಯಮಿಗಳು, ನವೋದ್ಯಮಿಗಳು ಪಾಲ್ಗೊಳ್ಳಲಿದ್ದಾರೆ. ಈ ನಡಿಗೆಯೂ ಬೆಂಗಳೂರು ನಂತರ ಮೈಸೂರು ಕೈಗಾರಿಕೆಗೆ ಪೂರಕ ವಾತಾವರಣವಿರುವ ಬಗ್ಗೆ ಸಾರ್ವಜನಿಕರ ಗಮನ ಸೆಳೆಯಲಿದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net