

ಮಂಡ್ಯ: ತಾಲೂಕಿನ ಬಿ.ಹೊಸೂರು ಗ್ರಾಮದಲ್ಲಿ ‘ಕಾಚಳ್ಳಿ ಗಿಡ’ದ ಹಣ್ಣು ತಿಂದ 12 ಮಂದಿಗೆ ರಕ್ತ ವಾಂತಿ, ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ.
ಉತ್ತರಪ್ರದೇಶದಿಂದ ಆಲೆಮನೆ ಕೆಲಸಕ್ಕೆಂದು ಮಂಡ್ಯಕ್ಕೆ ಬಂದಿರುವ ಕಾರ್ವಿುಕರು ಶನಿವಾರ ರಾತ್ರಿ ಕಾಚಳ್ಳಿ ಗಿಡದ ಹಣ್ಣು ತಿಂದು ಬಳಿಕ ಬಿ.ಹೊಸೂರು ಗ್ರಾಮದ ಜಗದೀಶ್ಗೂ ತಿನ್ನಲು ಹೇಳಿದ್ದಾರೆ. ಅದರಂತೆ, ಜಗದೀಶ್ ತಾವೂ ತಿಂದು ಪುತ್ರನಿಗೂ ನೀಡಿದ್ದರು. ಜತೆಗೆ, ಅಕ್ಕಪಕ್ಕದ ಮನೆಯ ಮಕ್ಕಳೂ ತಿಂದರು. ಕೆಲ ಸಮಯದ ನಂತರ ಎಲ್ಲರಿಗೂ ರಕ್ತ ವಾಂತಿ, ಭೇದಿ ಕಾಣಿಸಿಕೊಂಡಿದೆ. ಇದನ್ನೂ ಓದಿರಿ ಸಿಗಂದೂರು ಲಾಂಚ್ನಿಂದ ನದಿಗೆ ಹಾರಿದ ಮಹಿಳೆ! ಸಾಯಲೆಂದೇ ಬಂದವಳ ಜೀವ ಉಳಿದಿದ್ದೇಗೆ?
ತೀರಾ ಅಸ್ವಸ್ಥಗೊಂಡಿದ್ದ 6 ಜನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರೆ, ಸ್ವಲ್ಪ ಚೇತರಿಕೆ ಕಂಡಿದ್ದ ಇನ್ನುಳಿದವರಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ಉತ್ತರಪ್ರದೇಶದ ಕಾರ್ವಿುಕರಾದ ಅನಂತ್, ಸದ್ದಾಂ(26), ನಾಜೀಂ, ವಸೀಮ್(32), ಶಾಕೀಂ(22), ಬಿ.ಹೊಸೂರು ಗ್ರಾಮದ ಜಗದೀಶ್(40), ಇವರ ಪುತ್ರ ತೇಜು(7) ಹಾಗೂ ಅಕ್ಕಪಕ್ಕದ ಮನೆಗಳ ಮಕ್ಕಳಾದ ಚೈತ್ರಾ (8), ಕವನ(11), ಅಭಿಷೇಕ್(6), ದೀಕ್ಷಾ(5), ನಿತಿನ್(8) ಅವರು ಕಾಚಳ್ಳಿ ಹಣ್ಣು ತಿಂದು ಅಸ್ವಸ್ಥಗೊಂಡವರು.