ಎಂಡೋ ಸಲ್ಪಾನ್ ಪೀಡಿತರ ಆರೈಕೆಗೆ 100 ಹಾಸಿಗೆ ಆಸ್ಪತ್ರೆ

HEALTH CAMP INNAGURATION
Published on

ಹೊನ್ನಾವರ: ತಾಲೂಕಾ ಆಸ್ಪತ್ರೆಯಲ್ಲಿ ವಿವಿಧ ಇಲಾಖೆಯ ಆಶ್ರಯದಲ್ಲಿ ಎಂಡೋಸಲ್ಪಾನ್ ಪೀಡಿತರ ಆರೋಗ್ಯ ತಪಾಸಣಾ ಶಿಬಿರ ಸೋಮವಾರ ಆಯೋಜನೆಗೊಂಡಿತ್ತು.

ಉಸ್ತುವಾರಿ ಸಚಿವ ಮಂಕಾಳ ವೈದ್ಯ ಶಿಬಿರ ಉದ್ಘಾಟಿಸಿ ಮಾತನಾಡಿ, ಎಂಡೋಸಲ್ಪಾನ್ ಪೀಡಿತರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು, ಅವರು ನಮ್ಮಂತೆ ಬದುಕಬೇಕು ಎನ್ನುವುದು ಈ ಕಾರ್ಯಕ್ರಮದ ಉದ್ದೇಶ. ಎಂಡೋಸಲ್ಪಾನ್ ಪೀಡಿತರ ಆರೈಕೆಗಾಗಿ ಮಂಕಿಯಲ್ಲಿ ನೂರು ಹಾಸಿಗೆಯ ಆಸ್ಪತ್ರೆ ಮಾಡಲು ತೀರ್ವನಿಸಲಾಗಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮೀರಜ್ ವಿ.ವಿ., ನೋಡಲ್ ಅಧಿಕಾರಿ ಡಾ. ಸತೀಶ ಶೇಟ್, ತಾಲೂಕಾ ಅರೋಗ್ಯ ಅಧಿಕಾರಿ ಡಾ. ಉಷಾ ಹಾಸ್ಯಗಾರ, ವೈದ್ಯಾಧಿಕಾರಿ ಡಾ. ರಾಜೇಶ್ ಕಿಣಿ, ಗ್ಯಾರಂಟಿ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಅಣ್ಣಪ್ಪ ನಾಯ್ಕ ಹಾಗೂ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net