ಬಡವರಿಗೆ ದಿನಸಿ ಕಿಟ್ ವಿತರಣೆ

hrr cmc edit 18
ಹರಿಹರದ 29ನೇ ವಾರ್ಡ್‌ನ ನಿವಾಸಿಗಳಿಗೆ ನಗರಸಭೆ ಸದಸ್ಯ ಎಸ್.ಎಂ.ವಸಂತ್‌ಕುಮಾರ್ ಕೈಗೊಂಡಿರುವ ದಿನಸಿ ಕಿಟ್ ವಿತರಣೆ ಕಾರ್ಯಕ್ಕೆ ಶಾಸಕ ಎಸ್.ರಾಮಪ್ಪ ಚಾಲನೆ ನೀಡಿದರು. ಪೌರಾಯುಕ್ತೆ ಎಸ್.ಲಕ್ಷ್ಮಿ ಇತರರಿದ್ದರು.
Published on

ಹರಿಹರ: ತಾಲೂಕಿನ ಕಡು ಬಡವರಿಗೆ ಸೋಮವಾರದಿಂದ ಉಚಿತ ದಿನಸಿ ಕಿಟ್ ವಿತರಣೆ ಕಾರ್ಯ ನಡೆಯಲಿದೆ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.

ನಗರಸಭೆ ಸದಸ್ಯ ಎಸ್.ಎಂ.ವಸಂತ್‌ಕುಮಾರ್ ಕೈಗೊಂಡಿರುವ ತಮ್ಮ ವಾರ್ಡ್ ವ್ಯಾಪ್ತಿಯ ಗಂಗಾನಗರ, ಕೈಲಾಸ ನಗರ ಮತ್ತು ಶಕ್ತಿನಗರದ 350 ಕುಟುಂಬಗಳಿಗೆ ದಿನಸಿ ಹಾಗೂ ತರಕಾರಿ ಕಿಟ್ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಷ್ಟದಲ್ಲಿರುವವರಿಗೆ ಸ್ಪಂದಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಮೊದಲ ಹಂತದಲ್ಲಿ ಎಂಟು ಸಾವಿರ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಎರಡನೇ ಹಂತದಲ್ಲಿ ಗ್ರಾಮೀಣ ಪ್ರದೇಶದ ಹತ್ತು ಸಾವಿರ ಬಡವರಿಗೆ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.


ಪೌರಾಯುಕ್ತೆ ಎಸ್.ಲಕ್ಷ್ಮಿ, ನಗರಸಭೆ ಸದಸ್ಯ ಎಂ.ಎಸ್.ವಸಂತ್ ಕುಮಾರ್, ಮುಖಂಡರಾದ ಹಂಚಿನ ರಾಜಣ್ಣ, ಮಂಜಣ್ಣ, ಅರುಣ, ಅಣ್ಣಪ್ಪ, ರಾಜು, ಕಡೂರ್ ಪ್ರಭು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net