ರೈತರ ಪಂಪ್​ಸೆಟ್​ಗಳಿಗೆ ಸಮರ್ಪಕ ವಿದ್ಯುತ್​ ನೀಡಿ

ಲೋಡ್​ ಶೆಡ್ಡಿಂಗ್​ ಮತ್ತು ಅಸಮರ್ಪಕ ವಿದ್ಯುತ್​ ಪೂರೈಕೆ ನಿಲ್ಲಿಸುವಂತೆ ಗೌರಿಬಿದನೂರು ರೈತಸಂಘದ ಪದಾಧಿಕಾರಿಗಳು ಚಿಕ್ಕಬಳ್ಳಾಪುರ ಬೆಸ್ಕಾಂ ಕಾರ್ಯಪಾಲಕ ಅಭಿಯಂತರ ಆನಂದ್​ ಕುಮಾರ್​ ಅವರಿಗೆ ಮನವಿ ಪತ್ರ ಸಲ್ಲಿಸಿದರು.
Raitara Pumpsetgalige samrpaka vidyut needi
Published on

ತಾಲೂಕು ರೈತಸಂದಿಂದ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು
ತಾಲೂಕಿನಾದ್ಯಂತ ಮಳೆ ಇಲ್ಲದೆ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಯದಲ್ಲಿ ಲೋಡ್​ ಶೆಡ್ಡಿಂಗ್​ ಮಾಡುವುದನ್ನು ನಿಲ್ಲಿಸಿ, ರೈತರ ಪಂಪ್​ಸೆಟ್​ಗಳಿಗೆ ಹಗಲಿನಲ್ಲಿ ನಿರಂತರ 7 ಗಂಟೆ ವಿದ್ಯುತ್​ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿ ಬೆಸ್ಕಾಂ ಕಚೇರಿ ಮುಂದೆ ರೈತರು ಬುಧವಾರ ಪ್ರತಿಭಟನೆ ನಡೆಸಿದರು.
ತಾಲೂಕಿನಾದ್ಯಂತ ಸುಮಾರು 400 ರೈತರು ಅಕ್ರಮ -ಸಕ್ರಮದಲ್ಲಿ 25 ಕೆ.ವಿ. ಟ್ರಾನ್ಸ್​ಾಮ್​ರ್ ಅಳವಡಿಕೆಗೆ ಬೆಸ್ಕಾಂಗೆ 30,000 ರೂ. ವಂತಿಗೆ ನೀಡಿ 1 ವರ್ಷ ಕಳೆದರೂ ರೈತರಿಗೆ ವೈಯಕ್ತಿಕ ಟ್ರಾನ್ಸ್​ಾಮ್​ರ್ ಅಳವಡಿಸಿಲ್ಲ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಲೋ-ವೊಲ್ವೇಜ್​ನಿಂದ ಪಂಪ್​ಸೆಟ್​ಗಳು ಸುಟ್ಟು ಹೋಗುತ್ತಿವೆ. ಹೆಚ್ಚುವರಿ 63 ಕೆ.ವಿ. ಟ್ರಾನ್ಸ್​ಾಮ್​ರ್ ಅಳವಡಿಸಬೇಕು. ಎ.-1 ಪೀಡರ್​ನಲ್ಲಿ ಗುಂಡಾಪುರದಿಂದ ಅಲ್ಲಿಪುರಕ್ಕೆ ಒಂದೇ ಲೈನಿನಲ್ಲಿ ವಿದ್ಯುತ್​ ಸರಬರಾಜು ಆಗುತ್ತಿದೆ. ತಕ್ಷಣ ಅಲ್ಲಿಪುರಕ್ಕೆ ಬೇರೆ ಲೈನ್​ ಅಳವಡಿಸಿಬೇಕು. ವಿದ್ಯುತ್​ ಸರಬರಾಜು ಸಮಯದಲ್ಲಿ ಲೈನ್​ಮೆನ್​ಗಳು ಕೇಂದ್ರ ಸ್ಥಾನದಲ್ಲಿ ಇರಬೇಕು. ಸೆಕ್ಷನ್​ ಆಫೀಸರ್​ಗಳು ಅವರ ಕಾರ್ಯವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುವುದು ಸೇರಿ ವಿವಿಧ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದರು.
ತಾಲೂಕು ರೈತಸಂದ ಅಧ್ಯಕ್ಷ ಲೋಕೇಶ್​ಗೌಡ ಮಾತನಾಡಿ, ರೈತರ ಸಮಸ್ಯೆಯನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಕಾರ್ಯಪಾಲಕ ಅಭಿಯಂತರರ ಕಚೇರಿ ಮುಂದೆ ಅರ್ನಿದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಚ್ಚರಿಸಿದರು.
ರೈತ ಸಂದ ಪದಾಧಿಕಾರಿಗಳಾದ ಎಂ.ಆರ್​ ಲಕ್ಷ್ಮೀನಾರಾಯಣ್​, ಎ. ರಾಮಚಂದ್ರರೆಡ್ಡಿ, ಸನತ್​ ಕುಮಾರ್​, ಮುದ್ದುರಂಗಪ್ಪ, ಹಿರೇಬಿದನೂರು ರಾಜಣ್ಣ, ಶಶಿಕುಮಾರ್​, ಸುರೇಶ್​ ಕುಮಾರ್​, ಬಾಬು ರಾಮರೆಡಿ,್ಡ ನರಸಿಂಹಮೂರ್ತಿ, ಗೋಪಿನಂದನ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net