

ಬೆಂಗಳೂರು : ಎಚ್ಎಎಲ್ ರೂಪಿಸಿರುವ ಕ್ರಯೋಜೆನಿಕ್ ಪ್ರೊಪೆಲ್ಲಂಟ್ ಟ್ಯಾಂಕ್ ಅನ್ನು ಇಸ್ರೋಗೆ ಹಸ್ತಾಂತರ ಮಾಡಿದೆ. ಇದು ಎಚ್ಎಎಲ್ ಇತಿಹಾಸದಲ್ಲೇ ಹೊಸ ದಾಖಲೆಯನ್ನು ಸೃಷ್ಟಿಸಿದೆ.
ಜಿಎಸ್ಎಲ್ವಿ ಎಂಕೆ&3 ಉಡಾವನ ವಾಹನಕ್ಕೆ ಇದನ್ನು ಅಳಡಿಕೆ ಮಾಡಲಿದ್ದು, ಪೇ ಲೋಡ್ ಸಾಮರ್ಥ್ಯವನ್ನು ಹೆಚ್ಚಿಸಲಿದೆ.
ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಪ್ರೊಪೆಲ್ಲಂಟ್ ಟ್ಯಾಂಕ್ ಅನ್ನು ಎಚ್ಎಎಲ್ ನಿರ್ದೇಶಕ ಎಂ.ಎಸ್.ವೆಲ್ಪಾರಿ ಅವರು ಇಸ್ರೋ ನಿರ್ದೇಶಕ ಡಾ.ವಿ.ನಾರಾಯಣನ್ ಅವರಿಗೆ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ವೆಲ್ಪಾರಿ, ಇದು ಇಸ್ರೋ ಮತ್ತು ಎಚ್ಎಎಲ್ ನಡುವಿನ ಸಂಬಂಧವನ್ನು ವೃದ್ಧಿ ಮಾಡಲಿದೆ. ಇದು ಪಿಎಸ್ಎಲ್ವಿ ಮತ್ತು ಜಿಎಸ್ಎಲ್ವಿ ವಾಹನಗಳಲ್ಲಿ ಕಚ್ಚಾ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ಸಹಾಯ ಮಾಡುತ್ತದೆ. 4 ಮೀಟರ್ ಆಗಲ ಮತ್ತು 8 ಮೀಟರ್ ಉದ್ದ ಹಾಗೂ 5,755 ಕೆ.ಜಿ. ತೂಕವನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಎಲ್ಲ ಪರಿಶೀಲನೆ ಮಾಡಿ ಟ್ಯಾಂಕ್ ಪಡೆದುಕೊಳ್ಳಲಾಗಿದೆ ಎಂದರು. ಈ ವೇಳೆ ಇಸ್ರೋ (ವಿಎಸ್ಎಸ್ಸಿ) ನಿರ್ದೇಶಕ ಎಸ್.ಸೋಮನಾಥ್ ಹಾಗೂ ಇತರರು ಇದ್ದರು.