9ರಿಂದ ದುರ್ಗಾಪರಮೇಶ್ವರಿ ಜಾತ್ರಾ ಮಹೋತ್ಸವ

CTD 8 Durgaparameshwari--00003
Published on

ಚಿತ್ರದುರ್ಗ: ತಾಲೂಕಿನ ಐನಹಳ್ಳಿ ಕುರುಬರಹಟ್ಟಿ ಸಿದ್ಧಾರೂಢ ಶಾಖಾ ಆಶ್ರಮದಿಂದ ಮೇ 9ರಿಂದ 11ರ ವರೆಗೆ ದುರ್ಗಾ ಪರಮೇಶ್ವರಿ ಅಮ್ಮನವರ 27ನೇ ವರ್ಷದ ಜಾತ್ರಾ ಮಹೋತ್ಸವ ಆಯೋಜಿಸಲಾಗಿದೆ.
ಹಾಸನದ ಶ್ರೀ ಸಿದ್ಧಪ್ಪಸ್ವಾಮಿ ಮತ್ತು ಶ್ರೀ ರೇವಣ್ಣ ಚಿಬ್ಬೇನಹಳ್ಳಿ ಸಮ್ಮುಖದಲ್ಲಿ ಕಾರ್ಯಕ್ರಮಗಳು ಜರುಗಲಿದ್ದು, 9ರ ಬೆಳಗ್ಗೆ 9ರಿಂದ 10.30ರ ವರೆಗೆ ಅಮ್ಮನವರಿಗೆ ಗಂಗಾಪೂಜೆ ಮತ್ತು ಧ್ವಜಾರೋಹಣ ಮತ್ತು ತೀರ್ಥಪ್ರಸಾದ ವಿನಿಯೋಗಿಸಲಾಗುತ್ತದೆ.
ಬೊಮ್ಮೇನಹಳ್ಳಿ, ಹಿರೇಗುಂಟನೂರು ಗೊಲ್ಲರಹಟ್ಟಿ, ಬೊಮ್ಮಕ್ಕನಹಳ್ಳಿ, ಹಾಸನದ ದುರ್ಗಾಪರಮೇಶ್ವರಿ, ದಾವಣಗೆರೆ ಶ್ರೀ ಶಾಂತ ವೀರಸ್ವಾಮಿ, ಪರಶುರಾಂಪುರದ ಓಬನಹಳ್ಳಿ, ಮಾಳಪ್ಪನಹಟ್ಟಿ, ಐನಹಳ್ಳಿ ಕುರುಬರಹಟ್ಟಿ ಸಿದ್ಧಾರೂಢ ಸೇವಾ ಸಮಿತಿ, ಹನುಮಂತಪ್ಪ ಭಜನಾ ಮಂಡಳಿಗಳಿಂದ ಅಖಂಡ ಭಜನೆ ಕಾರ್ಯಕ್ರಮವಿರುತ್ತದೆ.
ಮುಂಜಾನೆ 2.30ಕ್ಕೆ ಸದ್ಗುರು ಶ್ರೀ ಸಿದ್ಧಪ್ಪಸ್ವಾಮಿ ಇವರಿಂದ ಗುರುಪೂಜೆ, ಸಿದ್ಧಾರೂಢ ಸೇವಾ ಸಮಿತಿಯಿಂದ ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗಿಸಲಾಗುತ್ತದೆ. 10ರ ಬೆಳಗ್ಗೆ 8ಕ್ಕೆ ಅಮ್ಮನವರ ದೇವಾಲಯದಿಂದ ಹೊರಟು, ಹೊಸಮನೆಗೆ ಹೋಗಿ ಅಲ್ಲಿಂದ 101 ಕುಂಭಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ, ಬೀರಲಿಂಗೇಶ್ವರಸ್ವಾಮಿ ದೇವಸ್ಥಾನ ಸಂಘದಿಂದ ಬಿಳಿಚೋಡು ಡೊಳ್ಳು ಕುಣಿತ, ಜಗಳೂರು ತಾಲೂಕು ಐನಹಳ್ಳಿ ಕುರುಬರಹಟ್ಟಿ ಗ್ರಾಮದ ಕೋಲಾಟ ಕಾರ‌್ಯಕ್ರಮಗಳಿರುತ್ತವೆ.
ಚಿತ್ರದುರ್ಗ ಸದ್ಗುರು ಕಬೀರಾನಂದಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಅವರಿಂದ ಪೂರ್ಣಾಹುತಿ, ಪ್ರವಚನ ನಡೆಯಲಿದೆ. ಪಾದಪೂಜೆ, ಮಂಗಳಾರತಿ ಬಳಿಕ ತೀರ್ಥ ಪ್ರಸಾದ ವಿನಿಯೋಗ ಹಾಗೂ ಮಧ್ಯಾಹ್ನ 12ರಿಂದ ಅನ್ನಸಂತರ್ಪಣೆ ಇರುತ್ತದೆ. ಸಂಜೆ 6.30 ರಿಂದ 7.30ರ ವರೆಗೆ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಲಲಿತ ಸಹಸ್ರನಾಮ, ಕುಂಕುಮಾರ್ಚನೆ. ಸಂಜೆ 7.30 ರಿಂದ 8.30ರ ವರೆಗೆ ಆಯಿತೋಳು ಚಂದ್ರಪ್ಪ ಮತ್ತು ಸಂಗಡಿಗರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮವಿರುತ್ತದೆ. 11ರ ಬೆಳಗ್ಗೆ 10.30ರಿಂದ 12.30ರ ವರೆಗೆ ಓಕಳಿ ಉತ್ಸವ ಕಾರ್ಯಕ್ರಮ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net