

ಬೋರಗಾಂವ: ಸ್ವಾಭಿಮಾನಿ ಶೇತಕರಿ ಸಂಘಟನೆಯ ನಾಯಕ, ಮಾಜಿ ಸಂಸದ ರಾಜು ಶೆಟ್ಟಿ ಕಬ್ಬಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡಲು ಅ.16ರಂದು ಜೈಸಿಂಗ್‌ಪುರದಲ್ಲಿ 24ನೇ ಕಬ್ಬಿನ ಪರಿಷತ್ ಆಯೋಜಿಸಿರುವ ಹಿನ್ನೆಲೆಯಲ್ಲಿ ಅ.9ರಂದು ಸಂಜೆ 5 ಗಂಟೆಗೆ ಪಟ್ಟಣದ ಶಿವಾಜಿ ಚೌಕದಲ್ಲಿ ಬೃಹತ್ ರೈತಸಭೆ ಜರುಗಲಿದೆ ಎಂದು ಸಂಘಟನೆ ಮುಖಂಡ ರಾಜು ಖಿಚಡೆ ಹೇಳಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಬ್ಬು ಪರಿಷತ್‌ನಲ್ಲಿ ರಾಜು ಶೆಟ್ಟಿ ನಿರ್ಧರಿಸುವ ಬೆಲೆ ಎಲ್ಲ ಕಾರ್ಖಾನೆಗಳು ಕೊಡಬೇಕು ಎಂದರು. ತಾತ್ಯಾಸಾಹೇಬ್ ಬಸ್ಸಣ್ಣವರ, ನಿಪ್ಪಾಣಿ ತಾಲೂಕು ರೈತ ಸಂಘದ ಅಧ್ಯಕ್ಷ ಬಂಟಿ ಪಾಟೀಲ, ಶೀತಲ್ ಸೋಬಾನೆ ಮಾತನಾಡಿದರು.
ಮುಖಂಡರಾದ ಸುನೀಲ ಪಾಟೀಲ್, ದಾರಿಖಾನ್ ಅಜ್ಜ, ರಮೇಶ ಮಾಲಗಾವೆ ಅಣ್ಣಾ ಪಾಟೀಲ, ಪಂಕಜ ತಿಪ್ಪನ್ನವರ, ಅಜಿತ್ ರೊಡ,್ಡ ಶಿಶಿರ ಸಾತಪುತೆ, ಶಿವಾಜಿ ಬೋರೆ, ಶೀತಲ ಗೊರವಾಡೆ, ಬಾಬು ಇಚಲಕರಂಜೆ, ಭರತ ಹವಲೆ, ಪಿಂಟು ಚೌಗುಲೆ, ಸಚಿನ ಹವಲೆ ಇತರರಿದ್ದರು.