9ರಂದು ದಿವ್ಯಾಪ್ರಭು ಅವರಿಗೆ ಬೀಳ್ಕೊಡುಗೆ

CTD 7 DC GRJ DIVAPRABU--02
Published on


ಚಿತ್ರದುರ್ಗ:ಚಿತ್ರದುರ್ಗ ನಾಗರಿಕ ವೇದಿಕೆ, ಧಾರವಾಡ ಜಿಲ್ಲೆಗೆ ವರ್ಗವಾಗಿರುವ ಡಿಸಿ ಜಿಆರ್‌ಜೆ ದಿವ್ಯಾಪ್ರಭು ಅವರಿಗೆ ಬೀಳ್ಕೊಡುಗೆ ಹಾಗೂ ಚಿತ್ರದುರ್ಗ ಜಿಲ್ಲೆ ನೂತನ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರ ಸ್ವಾಗತ ಸಮಾರಂಭವನ್ನು ಫೆ.9ರಂದು ಸಂಜೆ 5ಗಂಟೆಗೆ ನಗರದ ತರಾಸು ರಂಗಮಂದಿರದಲ್ಲಿ ಏರ್ಪಡಿಸಿದೆ.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಬಿ. ಎನ್.ಚಂದ್ರಪ್ಪ, ಎಸ್‌ಪಿ ಧರ್ಮೇಂದ್ರಕುಮಾರ್‌ಮೀನಾ,ಜಿಪಂ ಸಿಇಒ ಎಸ್.ಜೆ.ಸೋಮಶೇಖರ್,ಆಹಾರ ಇಲಾಖೆ ಆಯುಕ್ತೆ ವಿ.ವಿ. ಜೋತ್ಸ್ನಾ,ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷ ಲಕ್ಷ್ಮೀಕಾಂತರೆಡ್ಡಿ ಅವರು ಆಗಮಿಸಲಿದ್ದಾರೆ. ಕಾಂಗ್ರೆಸ್ ಮುಖಂಡರಾದ ಡಾ.ಎಚ್.ಎ.ಷಣ್ಮು ಖಪ್ಪ,ಫಾತ್ಯರಾಜನ್,ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಉಪಸ್ಥಿತರಿರುತ್ತಾರೆಂದು ಜಿಪಂ ಮಾಜಿ ಸದಸ್ಯ ಆರ್.ನರಸಿಂಹ ರಾಜು ಹಾಗೂ ಡಾ.ಸೌಮ್ಯಾಮಂಜುನಾಥ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net