9ರಂದು ಕಬ್ಬಹಳ್ಳಿಯಲ್ಲಿ ಕೃಷಿ ವಸ್ತುಪ್ರದರ್ಶನ

Published on

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಗ್ರಾಮದಲ್ಲಿ ನ.9ರಂದು ಕೃಷಿ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ, ಚಾಮರಾಜನಗರ ಕೃಷಿ ಮಹಾ ವಿದ್ಯಾಲಯದ ವತಿಯಿಂದ ನಡೆಯುತ್ತಿರುವ ಕೃಷಿ ಕಾರ್ಯಾನುಭವ ಶಿಬಿರದ ಪ್ರಯುಕ್ತ ಕೃಷಿ ವಸ್ತುಪ್ರದರ್ಶನ ಮತ್ತು ಕೃಷಿ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿದೆ.

ವಸ್ತು ಪ್ರದರ್ಶನದಲ್ಲಿ ಸಮಗ್ರ ಕೃಷಿ ಪದ್ಧತಿ, ರೇಷ್ಮೆ ಕೃಷಿ ಪದ್ಧತಿ, ಜೇನು ಕೃಷಿ ಹಾಗೂ ಸ್ಥಳೀಯ ಪ್ರಮುಖ ಬೆಳೆಗಳಾದ ಜೋಳ, ಸೂರ್ಯಕಾಂತಿ, ಬಾಳೆ, ಅರಿಶಿಣ ಬೆಳೆ, ಸಮಗ್ರ ಬೆಳೆ ವಿವರಣೆಗಳ ಹಾಗೂ ಬೀಜೋಪಚಾರ, ಕಾಂಪೋಸ್ಟ್ ಎರೆಹುಳು ಗೊಬ್ಬರ ತಯಾರಿಕೆ ವಿಧಾನಗಳ ಬಗ್ಗೆ ಮತ್ತು ವಿಶ್ವವಿದ್ಯಾನಿಲಯದ ಹಲವಾರು ತಂತ್ರಜ್ಞಾನಗಳ ಬಗ್ಗೆ ಜನರಿಗೆ ತಿಳಿಸಿಕೊಡಲು ಮತ್ತು ಜಲ ಕೃಷಿ ಶೂನ್ಯ ಶಕ್ತಿ ಶೀತಲೀಕರಣ ಮಾದರಿ ಕಿರು ಜಲನಯನ ಮಾದರಿ, ಪೌಷ್ಟಿಕ ಕೈ ತೋಟ, ಬೆಳೆ ಸಂಗ್ರಹಾಲಯದ ವಿವರಗಳು, ಹೈನುಗಾರಿಕೆ ಕುರಿತು ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net