

ನ್ಯಾಮತಿ: ಚುನಾವಣೆಯಲ್ಲಿ ಸೋತಿದ್ದೇವೆಂದು ಕೈಕಟ್ಟಿ ಕೂರದೇ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಎದುರಿಸಲು ಸಿದ್ಧ್ದರಾಗಿ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.
ಪಟ್ಟಣದ ಮಹಂತೇಶ್ವರ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ 9ನೇ ವರ್ಷದ ಸಾಧನೆ ಮತ್ತು ಮಹಾ ಸಂಪರ್ಕ ಅಭಿಯಾನ ಸಮಾರಂಭದಲ್ಲಿ ಬೂತ್‌ಮಟ್ಟದ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು.
26 ಪಕ್ಷಗಳು ಸೇರಿಕೊಂಡು ಮಹಾಘಟಬಂದನ್ ಮೂಲಕ ಮೋದಿಯವರನ್ನು ಸೋಲಿಸಲು ಒಂದಾಗಿವೆ. ಆದರೆ, ಮೋದಿಯವರು 3ನೇ ಬಾರಿಗೆ ಪ್ರಧಾನ ಮಂತ್ರಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ. ಸುರೇಶ್, ಜಿಲ್ಲಾ ಉಪಾಧ್ಯಕ್ಷ ನೆಲವೊನ್ನೆ ಮಂಜುನಾಥ್, ತಾಪಂ ಮಾಜಿ ಅಧ್ಯಕ್ಷ ಎಸ್.ಪಿ. ರವಿಕುಮಾರ್, ಬಗರ್‌ಹುಕುಂ ಕಮಿಟಿ ಮಾಜಿ ಅಧ್ಯಕ್ಷ ವೀರಣ್ಣ, ಬಿಜೆಪಿ ನಗರ ಅಧ್ಯಕ್ಷ ವಿರುಪಾಕ್ಷಪ್ಪ, ತಾಲೂಕು ಉಪಾಧ್ಯಕ್ಷ ನಟರಾಜ್, ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಕೆ. ರವಿಕುಮಾರ್, ಗಿರೀಶ್, ರಾಜೇಶ್ವರಿ, ರತ್ನಮ್ಮ, ಸಾವಿತ್ರಮ್ಮ, ಗೀತಮ್ಮ, ವರ ಮಹಾಲಕ್ಷ್ಮೀ, ಕವಿತಾ ಇತರರಿದ್ದರು.