ಮಹದೇಶ್ವರ ದೇಗುಲದ 9ನೇ ವಾರ್ಷಿಕೋತ್ಸವ

Published on

ಮೈಸೂರು:  ಕೆ.ಎನ್.ಪುರ ಬಡಾವಣೆಯ ಮಲೆ ಮಹದೇಶ್ವರ ಮತ್ತು ಆದಿಶಕ್ತಿ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದ 9ನೇ ವಾರ್ಷಿಕೋತ್ಸವ ನ.10 ಮತ್ತು 11ರಂದು ಆಯೋಜಿಸಲಾಗಿದೆ.

ನ.10 ರಂದು ಬೆಳಗ್ಗೆ 8ಕ್ಕೆ ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿದ್ದು, ಮಧ್ಯಾಹ್ನ 1ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಖಜಾಂಚಿ ಬಿ.ಪದ್ಮನಾಭ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನ.11ರಂದು ಬೆಳಗ್ಗೆ 8ಕ್ಕೆ ಮಹದೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಮಹಾಮಂಗಳಾರತಿ ನೆರವೇರಿಸಲಾಗುತ್ತದೆ. ಮಧ್ಯಾಹ್ನ 3ಕ್ಕೆ ಹುಲಿ ವಾಹನೋತ್ಸವ ದೇವಸ್ಥಾನದಿಂದ ಹೊರಟು ಕೆ.ಎನ್.ಪುರ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಸಾಗಲಿದೆ. ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ತನ್ವೀರ್‌ಸೇಠ್, ಟಿ.ಎಸ್. ಶ್ರೀವತ್ಸ ಇತರರು ಭಾಗವಹಿಸಲಿದ್ದಾರೆ. ಜೀರ್ಣೋದ್ಧಾರ ಸಂಬಂಧ ಲಕ್ಕಿ ಡ್ರಾ ಇರಲಿದ್ದು, ಚಿನ್ನ, ಬೆಳ್ಳಿ ಸೇರಿದಂತೆ ಒಟ್ಟು 40 ಬಹುಮಾನಗಳು ದೊರೆಯಲಿವೆ ಎಂದು ಹೇಳಿದರು.

ಮುಖಂಡರಾದ ಕಾಂಕ್ರೀಟ್ ರಾಜು, ಅಂಬರೀಷ್, ಎಂ.ಕೆ.ಮಹದೇವ್, ಚಂದ್ರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net