

ಮೈಸೂರು: ಆನ್‌ಲೈನ್ ಮೂಲಕ ಸ್ಟಾಕ್ಸ್ ಟ್ರೇಡಿಂಗ್ ವ್ಯವಹಾರದಲ್ಲಿ ನಗರದ ವ್ಯಕ್ತಿಯೊಬ್ಬರು 99.50 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಮೈಸೂರಿನ ದಟ್ಟಗಳ್ಳಿ ನಿವಾಸಿ ಚಿದಾನಂದ್ ಎಂಬುವವರು ವಂಚನೆಗೆ ಒಳಗಾದವರು. ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಬಂದ ಹೂಡಿಕೆಯ ಜಾಹೀರಾತು ನೋಡಿ, ಸ್ಟಾಕ್ಸ್ ಟ್ರೇಡಿಂಗ್ ವ್ಯವಹಾರದಲ್ಲಿ ಹಣ ಹೂಡಿಕೆಯನ್ನು ಆರಂಭಿಸಿದ್ದಾರೆ.
ಹಂತ ಹಂತವಾಗಿ 99.50 ಲಕ್ಷ ರೂ. ಹೂಡಿಕೆ ಮಾಡಿದ್ದು, ಆನ್‌ಲೈನ್ ಮೂಲಕವೇ ಕೆಲವೇ ದಿನಗಳಲ್ಲಿ 19 ಕೋಟಿ ರೂ. ಆದಾಯ ತೋರಿಸಲಾಗಿದೆ. ಆ ಹಣವನ್ನು ವಾಪಸ್ ಪಡೆದುಕೊಳ್ಳಲು ಆಗಿಲ್ಲ.
ಆಗಲೇ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ ಎಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೆನ್ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.