

ಕಡೂರು: ಷೇರುದಾರರ ಸಹಕಾರದಿಂದ ಸಂಘ16 ಲಕ್ಷ ರೂ.ನಿವ್ವಳ ಲಾಭಗಳಿಸಿದೆ ಎಂದು ಕಡೂರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಎಂ.ರಂಗನಾಥ್ ತಿಳಿಸಿದರು.
ಕಡೂರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, 2,300 ಸದಸ್ಯರನ್ನು ಹೊಂದಿರುವ ಸಂಘ ಸಾಲ ವಸೂಲಾತಿಯಲ್ಲೂ ಶೇ.99ರಷ್ಟು ಪ್ರಗತಿ ಸಾಧಿಸಿದೆ. ನಿರ್ದೇಶಕ ಆಡಳಿತ ಮಂಡಳಿ ಪ್ರೋತ್ಸಾಹದಿಂದ ಮತ್ತಷ್ಟು ಸೌಲಭ್ಯಗಳನ್ನು ಒದಗಿಸಲು ಸಂಘವು ಶ್ರಮಿಸಲಿದೆ ಎಂದರು.
ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಮಾತನಾಡಿ, ಈಗಾಗಲೇ ಸಂಘದ 905 ಜನ ಸದಸ್ಯರಿಗೆ 11.51 ಕೋಟಿ ಕೃಷಿ ಸಾಲ ನೀಡಲಾಗಿದೆ. ಸ್ವ ಸಹಾಯ ಸಂಘಗಳಿಗೆ 55.75 ಲಕ್ಷ ರೂ. ಆಭರಣದ ಮೇಲೆ 45 ಲಕ್ಷ ರೂ.ಸಾಲ ನೀಡಲಾಗಿದೆ. ಅಪೆಕ್ಸ್ ಬ್ಯಾಂಕ್‌ನಿಂದ ಎ ಗ್ರೇಡ್ ಮಾನ್ಯತೆ ಪಡೆದಿದೆ ಎಂದರು.
ಉಪಾಧ್ಯಕ್ಷ ಕೆ.ಜಿ. ರುದ್ರಪ್ಪ, ನಿರ್ದೇಶಕರಾದ ಸಿ.ಎನ್. ಈಶ್ವರಪ್ಪ, ದ್ರಾಕ್ಷಯಣಮ್ಮ, ಎಚ್.ಎಸ್.ತೇಜರಾಜ್, ಡಿ.ಪ್ರಶಾಂತ್, ಕೆ.ಆರ್.ಕೃಷ್ಣಮೂರ್ತಿ, ಆರ್.ರಾಜಪ್ಪ, ನಿರ್ಮಲ, ಕೆ.ಎನ್.ಮೇಘರಾಜ್, ಪಿ.ವಿ.ಪವನ್, ಸಿಇಒ ಆರ್.ಗಂಗಾಧರ್‌ನಾಯ್ಕ ಹಾಗೂ ಸಿಬ್ಬಂದಿ ಇದ್ದರು.