ಹಕ್ಕು ಚಲಾಯಿಸಿದ 97 ಮತದಾರರು

oppo_2
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಣಗಳ್ಳಿ ಗ್ರಾಮದ ವೃದ್ಧೆ ಪುಟ್ಟಸಿದ್ದಪ್ಪ ಅವರ ಮನೆಗೆ ಚುನಾವಣಾ ಕಾರ್ಯನಿರತ ಸಿಬ್ಬಂದಿಗಳು ತೆರಳಿ ಮತದಾನ ಮಾಡಿಸಿದರು.
Published on

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲ 97 ಮತದಾರರು ಶನಿವಾರ ಅಂಚೆ ಮತದಾನದ ಮೂಲಕ ಹಕ್ಕು ಚಲಾಯಿಸಿದರು.

ಮನೆಯಲ್ಲಿಯೇ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಕ್ಷೇತ್ರ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ 61 ಹಾಗೂ 46 ಅಂಗವಿಕಲರು ಸೇರಿದಂತೆ ಒಟ್ಟು 107 ಮತದಾರರಿದ್ದರು. ಇವರು ನಮೂನೆ 12 (ಡಿ) ಮೂಲಕ ಮತ ಚಲಾಯಿಸಲು ಸ್ವಇಚ್ಛೆಯಿಂದ ಅವಕಾಶ ಕೋರಿದ್ದರು. ಈ ಹಿನ್ನೆಲೆಯಲ್ಲಿ ಸಹಾಯಕ ಚುನಾವಣಾಧಿಕಾರಿ ಮಲ್ಲಿಕಾರ್ಜುನ ಅವರು 7 ಮಾರ್ಗಗಳಲ್ಲಿ ವಾಹನಗಳ ಮೂಲಕ ಸೆಕ್ಟರ್ ಅಧಿಕಾರಿ, ಮತಗಟ್ಟೆ ಅಧಿಕಾರಿ, ಬಿಎಲ್‌ಒ ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ಮನೆ ಮನೆಗಳಿಗೆ ತೆರಳಿ ಆರ್ಹರಿಂದ ಮತ ಚಲಾಯಿಸಿದರು. ಇನ್ನುಳಿದ 10 ಮತದಾರರಲ್ಲಿ ನೋಂದಣಿಯಾದ ಬಳಿಕ ಐದು ಜನ ಮೃತಪಟ್ಟಿದ್ದರೆ, ಇನ್ನು ಐವರು ಆಸ್ಪತ್ರೆಗೆ ದಾಖಲಾಗಿದ್ದು ಇವರಿಗೆ ಮತ ಚಲಾಯಿಸಲು ಅವಕಾಶ ನೀಡಲಾಗುವುದು ಎಂದು ಸಹಾಯಕ ಚುನಾವಣಾಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net