ಬಿಜಿಎಸ್ ಪ್ರೌಢಶಾಲೆಗೆ ಶೇ.97 ಲಿತಾಂಶ

bhr sanvi
ಸಾನ್ವಿ
Published on

ಬಾಳೆಹೊನ್ನೂರು: ಪಟ್ಟಣದ ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.97 ಲಿತಾಂಶ ಲಭಿಸಿದೆ ಎಂದು ಪ್ರಾಚಾರ್ಯ ಡಾ. ವೈ.ಎ.ಸುರೇಶ್ ತಿಳಿಸಿದ್ದಾರೆ. 31 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 4 ಮಂದಿಗೆ ಅತ್ಯುನ್ನತ ಶ್ರೇಣಿ ಲಭಿಸಿದೆ. ಎಂ.ಪಿ.ಸಾನ್ವಿ 577 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ.

ಸಮೀಪದ ಸಿಆರ್‌ಎಸ್ ಭಾರತೀಯ ಕಾಫಿ ವಿದ್ಯಾಲಯದ ಎಸ್.ಆರ್.ಸ್ವರೂಪ್ ಹೊಳ್ಳ 598 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾನೆ.
ಪಟ್ಟಣದ ಎಸ್‌ಜೆಆರ್ ಪ್ರೌಢಶಾಲೆಗೆ ಶೇ.98.5 ಲಿತಾಂಶ ಲಭಿಸಿದೆ ಎಂದು ಪ್ರಾಚಾರ್ಯ ಕೆ.ಆರ್.ಬೂದೇಶ್ ತಿಳಿಸಿದ್ದಾರೆ. ಪರೀಕ್ಷೆಗೆ 43 ವಿದ್ಯಾರ್ಥಿಗಳು ಹಾಜರಾಗಿದ್ದು, 42 ಮಂದಿ ಉತ್ತೀರ್ಣಗೊಂಡಿದ್ದಾರೆ. ಆಂಗ್ಲ ಮಾಧ್ಯಮ ವಿಭಾಗದಲ್ಲಿ ಎಲ್ಲ ವಿದ್ಯಾರ್ಥಿಗಳೂ ತೇರ್ಗಡೆಗೊಂಡು ಶೇ.100, ಕನ್ನಡ ಮಾಧ್ಯಮದಲ್ಲಿ ಶೇ.98 ಲಿತಾಂಶ ಲಭಿಸಿದೆ. ಸಾ ಖತಿಜಾ ಶೇ.83, ರಿತೇಶ್ ಶೇ.82, ಜಶ್ವಂತ್ ಶೇ.82 ಹೆಚ್ಚು ಅಂಕ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net