

ಹುಬ್ಬಳ್ಳಿ: ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ ಹೆಚ್ಚಿನ ಲಾಭಗಳಿಸಬಹುದೆಂದು ನಂಬಿಸಿದ ವಂಚಕರು, ನಗರದ ಮಹಿಳೆಯೊಬ್ಬರಿಂದ ಬರೋಬ್ಬರಿ 97.50 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಿಳೆಗೆ ಬಜಾಜ್ ಎಸ್‌ಎಸ್‌ಟಿ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಸಿದ ವಂಚಕರು, ನಂತರ 44 ಸಾವಿರ ರೂ. ಹೂಡಿಕೆ ಮಾಡಿಸಿದ್ದಾರೆ. ಇದಕ್ಕೆ 52 ಸಾವಿರ ರೂ. ಲಾಭ ನೀಡಿದ್ದಾರೆ. ನಂತರ ಹಂತ ಹಂತವಾಗಿ 97,50,953 ಲಕ್ಷ ರೂ. ವರ್ಗಾಯಿಸಿಕೊಂಡು ವಿಜಯ ಬಜಾಜ್, ರಮಾಲಕ್ಷ್ಮೀ ಎಂಬುವವರು ವಂಚಿಸಿದ್ದಾರೆ ಎಂದು ಮಹಿಳೆಯರು ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.