ಕೋಲಾರ ಜಿಲ್ಲೆಯಲ್ಲಿ 96 ಹೊಸ ಪ್ರಕರಣ

IMG-20200813-WA0019
Published on

ಕೋಲಾರ: ಜಿಲ್ಲೆಯಲ್ಲಿ ಗುರುವಾರ 96 ಮಂದಿಗೆ ಕರೊನಾ ದೃಢಪಟ್ಟಿದ್ದು, 40 ಮಂದಿ ಗುಣಮುಖರಾಗಿದ್ದಾರೆ.

ಕೋಲಾರದಲ್ಲಿ 27, ಮಾಲೂರಿನಲ್ಲಿ 7, ಬಂಗಾರಪೇಟೆಯಲ್ಲಿ 9, ಕೆಜಿಎಫ್‌ನಲ್ಲಿ 11, ಮುಳಬಾಗಿಲಿನಲ್ಲಿ 30, ಶ್ರೀನಿವಾಸಪುರದಲ್ಲಿ 12 ಮಂದಿಗೆ ಸೋಂಕು ದೃಢಪಟ್ಟಿದೆ. ಇವರಲ್ಲಿ 77 ಮಂದಿ ವಿಷಮ ಶೀತಜ್ವರದಿಂದ ಬಳಲುತ್ತಿದ್ದು, 17 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಇಬ್ಬರು ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದಾರೆ. 22 ಮಂದಿ ಮನೆಯಲ್ಲೇ ಐಸೋಲೇಷನ್‌ನಲ್ಲಿದ್ದು, ಉಳಿದವರು ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್‌ಗಳಲ್ಲಿದ್ದಾರೆ.

ಸೋಂಕಿತರ ಪ್ರಥಮ ಸಂಪರ್ಕದಲ್ಲಿದ್ದ 576 ಮಂದಿ, ದ್ವಿತೀಯ ಸಂಪರ್ಕದಲ್ಲಿದ್ದ 288 ಮಂದಿ ಮೇಲೆ ನಿಗಾ ಇಡಲಾಗಿದೆ. 642 ಮಾದರಿಗಳನ್ನು ಪಡೆಯಲಾಗಿದ್ದು, 305 ಮಾದರಿಗಳಲ್ಲಿ ನೆಗೆಟಿವ್ ಬಂದಿದೆ. 337 ಮಾದರಿಗಳ ಫಲಿತಾಂಶ ಇನ್ನಷ್ಟೇ ಬರಬೇಕಿದೆ.

40 ಮಂದಿ ಗುಣ: ಕೋಲಾರದ 13, ಮಾಲೂರು 8, ಬಂಗಾರಪೇಟೆ 10, ಕೆಜಿಎಫ್ 4, ಮುಳಬಾಗಿಲು 2 ಹಾಗೂ ಶ್ರೀನಿವಾಸಪುರದಲ್ಲಿ 3 ಸೋಂಕಿತರು ಸೇರಿ ಒಟ್ಟು 40 ಮಂದಿ ಗುಣವಾಗಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 32135 ಮಂದಿಯನ್ನು ಕರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, 27423 ಮಂದಿಗೆ ನೆಗೆಟಿವ್ ಫಲಿತಾಂಶ ಬಂದಿದೆ. 2184 ಮಂದಿಗೆ ಸೋಂಕು ದೃಢಪಟ್ಟಿದೆ. 1018 ಮಂದಿ ಗುಣವಾಗಿದ್ದು, ಕೋಲಾರದಲ್ಲಿ 452, ಮಾಲೂರಿನಲ್ಲಿ 193, ಬಂಗಾರಪೇಟೆಯಲ್ಲಿ 142, ಕೆಜಿಎಫ್ 135, ಮುಳಬಾಗಿಲಿನಲ್ಲಿ 108 ಹಾಗೂ ಶ್ರೀನಿವಾಸಪುರದಲ್ಲಿ 89 ಮಂದಿ ಸೇರಿ ಒಟ್ಟು 1119 ಸಕ್ರಿಯ ಪ್ರಕರಣಗಳಿವೆ. ಇವರಲ್ಲಿ 20 ಮಂದಿ ಐಸಿಯುನಲ್ಲಿದ್ದಾರೆ.

ಗರ್ಭಿಣಿಗೆ ಪಾಸಿಟಿವ್: ಕೋಲಾರ: ಮಾಲೂರು ತಾಲೂಕಿನ ಬಾಳಿಗನಹಳ್ಳಿ ಗ್ರಾಮ ಪಂಚಾತಿ ವ್ಯಾಪ್ತಿಯ ಚಳಗನಹಳ್ಳಿಯಲ್ಲಿ ಗರ್ಭಿಣಿಯೊಬ್ಬರಿಗೆ ಸೋಂಕು ತಗುಲಿದೆ. ನಾಲ್ಕು ದಿನಗಳ ಹಿಂದೆ ಮಾಸ್ತಿ ಸರ್ಕಾರಿ ಆಸ್ಪತ್ರೆಯಲ್ಲಿ ಕೊವೀಡ್ ಪರೀಕ್ಷೆ ಮಾಡಲಾಗಿತ್ತು. ಬುಧವಾರ ವರದಿ ಪಾಸಿಟಿವ್ ಬಂದಿದ್ದು, ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದೆ. ಸೋಂಕಿತರ ಸಂಪರ್ಕದಲ್ಲಿದ್ದ ಕುಟುಂಬದವರು, ಅಕ್ಕಪಕ್ಕದ ಮನೆಯವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net