ಮಾದಾರ ಚನ್ನಯ್ಯರ 954ನೇ ವರ್ಷದ ಜಯಂತ್ಯುತ್ಸವ: ಡಿ.26ರಂದು ಮಂಡ್ಯದಲ್ಲಿ ವಚನ ಗಾಯನ ಸ್ಪರ್ಧೆ

954th year birth anniversary of Madara Channayya mandya
Published on

ಮಂಡ್ಯ: ಕನ್ನಡದ ಮೊದಲ ವಚನಕಾರ ಶಿವನೊಡನೆ ಹಂಪಲಿ ಕುಡಿದವ, ಘನಶಿವಶರಣ ಮಾದಾರ ಚನ್ನಯ್ಯನವರ ಹೊಸ್ತಿಲ ಹುಣ್ಣಿಮೆಯ 954ನೇ ವರ್ಷದ ಜಯಂತ್ಯೋತ್ಸವ ಮತ್ತು ಶರಣ ಚನ್ನಯ್ಯನವರ ಕುರಿತು ಉಪನ್ಯಾಸ, ಹೊಸ ವರ್ಷದ ದಿನದರ್ಶಿಕೆ ಬಿಡುಗಡೆ, ಕೃತಿ ಬಿಡುಗಡೆ ಹಾಗೂ ವಚನ ಗಾಯನ ಸ್ಪರ್ಧೆ ಡಿ.26ರಂದು ನಗರದ ಗಾಂಧಿಭವನದಲ್ಲಿ ನಡೆಯಲಿದೆ ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ತಿಳಿಸಿದರು.

ವಿಶ್ವ ಮಾನವ ವಿಚಾರ ವೇದಿಕೆ ಮಳವಳ್ಳಿ, ಕನ್ನಡಸೇನೆ, ಕಸ್ತೂರಿ ಸಿರಿಗನ್ನಡ ವೇದಿಕೆ ಸಹಯೋಗದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅಂದು ಬೆಳಗ್ಗೆ 10ಗಂಟೆಗೆ ಹಿರಿಯ ಸಾಹಿತಿ ಮ.ಸಿ.ನಾರಾಯಣ ಅವರ ಅಡ್ಡೆ, ಆತ್ಮ ಚರಿತ್ರೆ ಮತ್ತು ಮಾನವೀಯತೆಯ ಹರಿಕಾರರು ಚಿತ್ರಕಥೆ ಬಿಡುಗಡೆಯಾಲಿದೆ. ಇನ್ನು ಸ್ಪರ್ಧೆಗೆ ಭಾಗವಹಿಸುವವರು 100 ರೂ ಪ್ರವೇಶ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು. ವಿಜೇತರಿಗೆ 5 ಸಾವಿರ ರೂ ಪ್ರಥಮ, 3 ಸಾವಿರ ರೂ ದ್ವಿತೀಯ ಹಾಗೂ 2 ಸಾವಿರ ರೂಗಳನ್ನು ತೃತೀಯ ಬಹುಮಾನವಾಗಿ ನೀಡಿ ಗೌರವಿಸಲಾಗುವುದು. ಭಾಗವಹಿಸುವ ಎಲ್ಲರಿಗೂ ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸ್ಪರ್ಧಿಗಳಿಗೆ ಚನ್ನಯ್ಯನವರ 12 ವಚನಗಳ ಪ್ರತಿಗಳು ವೇದಿಕೆಯಿಂದ ನೀಡಲಾಗುವುದು. 10 ವರ್ಷ ಮೇಲ್ಪಟ್ಟ ಸ್ಪರ್ಧಿಗಳು ಭಾಗವಹಿಸಬಹುದು. ಆಧಾರ್ ಕಾರ್ಡ್ ನಕಲು ಪ್ರತಿಯನ್ನು ಕಡ್ಡಾಯವಾಗಿ ನೀಡಬೇಕು. ನೋಂದಣಿ ಮಾಡಿಕೊಳ್ಳಲು ಡಿ.20ರೊಳಗೆ ಮೊ.ಸಂ 9448740759 ಮತ್ತು 9972116444 ಯನ್ನು ಸಂಪರ್ಕಿಸಬಹುದೆಂದು ಮನವಿ ಮಾಡಿದರು.

ಸಾಹಿತಿ ಮ.ಸಿ.ನಾರಾಯಣ, ನಾಗೇಶ್, ಪೋತೇರ ಮಹದೇವ, ಚನ್ನೇಗೌಡ, ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net