

ಹಾವೇರಿ: ಜಿಲ್ಲೆಯಲ್ಲಿ ಶನಿವಾರ ಒಟ್ಟು 95 ಜನರಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ. 40 ಜನರು ಗುಣವಾಗಿ ಬಿಡುಗಡೆಯಾಗಿದ್ದರೆ, ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ತಿಳಿಸಿದ್ದಾರೆ.
ಈವರೆಗೆ 1,764 ಕರೊನಾ ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ. 953 ಜನರು ಸೋಂಕಿನಿಂದ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. 35 ಜನರು ಮೃತಪಟ್ಟಿದ್ದಾರೆ. 776 ಪ್ರಕರಣಗಳು ಸಕ್ರಿಯವಾಗಿವೆ. ರಾಣೆಬೆನ್ನೂರ ತಾಲೂಕಿನ 19, ಹಾವೇರಿ ತಾಲೂಕಿನ 10, ಸವಣೂರ ತಾಲೂಕಿನ 5, ಹಿರೇಕೆರೂರ, ಬ್ಯಾಡಗಿ ತಾಲೂಕಿನ ತಲಾ ಮೂವರು ಸೇರಿ 40 ಜನರು ಗುಣವಾಗಿದ್ದಾರೆ.
ಹಾವೇರಿ ನಗರದಲ್ಲಿ 21, ಹಾವನೂರ ಗ್ರಾಮದ 11, ಗುಯಿಲಗುಂದಿ, ಕಳ್ಳಿಹಾಳ, ಗುಡಿಸಲಕೊಪ್ಪ, ಗುತ್ತಲ, ಗುತ್ತಲ ತಾಂಡಾ, ಬೆಳವಿಗಿ ಗ್ರಾಮದಲ್ಲಿ ತಲಾ ಒಬ್ಬರಿಗೆ ಸೇರಿ 38 ಜನರಿಗೆ ಸೋಂಕು ದೃಢಪಟ್ಟಿದೆ. ರಾಣೆಬೆನ್ನೂರ ನಗರದಲ್ಲಿ 18 ಜನರಿಗೆ, ಅಸುಂಡಿ 2, ಚಿಕ್ಕಅರಳಿಹಳ್ಳಿ, ಇಟಗಿ, ಗುಡ್ಡದಆನ್ವೇರಿ ಗ್ರಾಮದ ತಲಾ ಒಬ್ಬರಿಗೆ ಸೇರಿ ಒಟ್ಟು 23 ಜನರಿಗೆ ಸೋಂಕು ತಗುಲಿದೆ. ಹಿರೇಕೆರೂರ ಪಟ್ಟಣದಲ್ಲಿ 3, ರಟ್ಟಿಹಳ್ಳಿ 2, ಹಿರೇಮಾದಾಪುರ ಗ್ರಾಮದಲ್ಲಿ 4, ಬನ್ನಿಹಟ್ಟಿ 2, ಹಂಸಭಾವಿ, ಖಂಡೇಬಾಗೂರ, ತಿಪ್ಪಾಯಿಕೊಪ್ಪ, ಮಾಸೂರ, ಚಿಕ್ಕಯಡಚಿ ಗ್ರಾಮದಲ್ಲಿ ತಲಾ ಒಬ್ಬರಿಗೆ ಸೇರಿ ಒಟ್ಟು 16 ಜನರಿಗೆ ಸೋಂಕು ತಗುಲಿದೆ.
ಬ್ಯಾಡಗಿ ಪಟ್ಟಣದ ನೆಹರು ನಗರದಲ್ಲಿ 4, ಗಾಂಧಿನಗರದಲ್ಲಿ 2, ಅಂದಾನಿಕೊಪ್ಪ, ಚಿನ್ನಿಕಟ್ಟಿ, ಮಾಸಣಗಿ ಗ್ರಾಮದಲ್ಲಿ ತಲಾ ಒಬ್ಬರಿಗೆ ಸೇರಿ ಒಟ್ಟು 9 ಜನರಿಗೆ ಸೋಂಕು ಖಚಿತವಾಗಿದೆ. ಹಾನಗಲ್ಲ ಪಟ್ಟಣದಲ್ಲಿ 2, ಅಕ್ಕಿಆಲೂರ, ಕಾಮನಹಳ್ಳಿ, ಅರೇಲಕಮಾಪುರದಲ್ಲಿ ತಲಾ ಒಬ್ಬರಿಗೆ ಸೇರಿ ಒಟ್ಟು ಐವರಿಗೆ ಸೋಂಕು ದೃಢಪಟ್ಟಿದೆ.ಶಿಗ್ಗಾಂವಿ ಪಟ್ಟಣ, ಹಿರೇಮಲ್ಲೂರ, ಬೆಳಗಲಿ ಗ್ರಾಮದಲ್ಲಿ ತಲಾ ಒಬ್ಬರಿಗೆ, ಸವಣೂರ ಪಟ್ಟಣದಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ಇಬ್ಬರ ಸಾವು: ರಾಣೆಬೆನ್ನೂರ ನಗರದ 54 ವರ್ಷದ ಹಾಗೂ 51 ವರ್ಷದ ಪುರುಷರಿಬ್ಬರು ತೀವ್ರ ಉಸಿರಾಟದ ತೊಂದರೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ರ್ಯಾಪಿಡ್ ಆಂಟಿಜನ್ ಕಿಟ್ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿತ್ತು. 54 ವರ್ಷದ ಪುರುಷ ಆ. 6ರಂದು, 51 ವರ್ಷದ ಪುರುಷ ಆ. 7ರಂದು ಮೃತಪಟ್ಟಿದ್ದಾರೆ.