93 ಕ್ವಿಂಟಾಲ್ ಪಡಿತರ ಜೋಳ ವಶಕ್ಕೆ

Crime Logo
Published on

ಕಲಬುರಗಿ: ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ೯೩ ಕ್ವಿಂಟಾಲ್ ಪಡಿತರ ಜೋಳವನ್ನು ವಶಕ್ಕೆ ಪಡೆದು, ಚಾಲಕನನ್ನು ಬಂಧಿಸಿಸಲಾಗಿದೆ. ನಗರದ ಡಬರಾಬಾದ್ ಕ್ರಾಸ್‌ನಿಂದ ಆಳಂದ ಚೆಕ್ ಪೋಸ್ಟ್ ಕಡೆಗೆ ಹೋಗುವಾಗ ಆಹಾರ ನಿರೀಕ್ಷಕರು, ಪೊಲೀಸ್ ಸಿಬ್ಬಂದಿ ಜಂಟಿಯಾಗಿ ದಾಳಿ ನಡೆಸಿದ್ದು, ಇಚರ್ ವಾಹನದಲ್ಲಿ ೫೦ ಕೆ.ಜಿ. ತೂಕದ ೧೮೬ ಜೋಳದ ಚೀಲಗಳು ಪತ್ತೆಯಾಗಿವೆ. ಚಾಲಕ ಮಹ್ಮದ್ ಯಾಸಿನ್‌ನನ್ನು ವಿಚಾರಿಸಿದಾಗ ಸದ್ದಾಂ ಲಾಲ್ ಮಹ್ಮದ್ ಅವರು ವಾಹನ ನೀಡಿ, ಲಾತೂರ್‌ಗೆ ತೆಗೆದುಕೊಂಡು ಹೋಗಲು ತಿಳಿಸಿದ್ದಾರೆ. ಯಾವುದೇ ದಾಖಲೆ ಇಲ್ಲ ಎಂದು ಬಾಯಿಬಿಟ್ಟಿದ್ದಾನೆ. ಚಾಲಕನ್ನು ಬಂಧಿಸಿ, ಜೋಳದ ಚೀಲ, ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಚಾಲಕ ಮಹ್ಮದ್ ಯಾಸಿನ್, ವಾಹನ ತೆಗೆದುಕೊಂಡು ಹೋಗಲು ಹೇಳಿದ ಸದ್ದಾಂ ಲಾಲ್ ಮಹ್ಮದ್, ವಾಹನದ ಮಾಲಿಕ ಸೈಯದ್ ಜಹಾಂಗೀರ ವಿರುದ್ಧ ಆಹಾರ ನಿರೀಕ್ಷಕ ಯಲ್ಲಾಲಿಂಗ ದೂರು ನೀಡಿದ್ದು, ಸಬ್ ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಎಎಸ್‌ಐ ಉಮಾಕಾಂತ, ಎಚ್‌ಸಿ ಪುಂಡಲಿಕ, ಪಿಸಿ ಶಶಿಕಾಂತ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net