93 ಲಕ್ಷ ವಾಹನ ಸವಾರರು ದಂಡ ಕಟ್ಟಿಲ್ಲ; 329 ಕೋಟಿ ರೂ. ದಂಡ ವಸೂಲಿ ಬಾಕಿ

Traffic
Published on

ಬೆಂಗಳೂರು: ಕಳೆದ ಮೂರು ವರ್ಷದ ಅವಧಿಯಲ್ಲಿ 92.84 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ನಗರ ಪೊಲೀಸರಿಗೆ 329 ಕೋಟಿ ರೂ. ದಂಡ ಮೊತ್ತ ವಸೂಲಿಯಾಗಬೇಕಿದೆ. ವರ್ಷದಿಂದ ವರ್ಷಕ್ಕೆ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ವಾಹನ ಸವಾರರು ಸಂಚಾರ ನಿಯಮ ಉಲ್ಲಂಸುತ್ತಿರುವುದೇ ಇದಕ್ಕೆ ಕಾರಣವೂ ಹೌದು. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ರೀತಿಯ ಕ್ರಮ ಕೈಗೊಳ್ಳುತ್ತಲೇ ಇದೆ.  ಸಂಚಾರ ನಿಯಮ ಉಲ್ಲಂಘನೆಗೆ ದಂಡ ಹೆಚ್ಚಿಸಿದೆ. ಆದಾಗ್ಯೂ ವಾಹನ ಸವಾರರು ಎಚ್ಚೆತ್ತುಕೊಂಡಿಲ್ಲ.

ದ್ವಿಚಕ್ರ ವಾಹನ ಸವಾರರು ಹೆಚ್ಚಿನ ಪ್ರಮಾಣದಲ್ಲಿ ದಂಡ ಕಟ್ಟಿಲ್ಲ. ಈ ಪೈಕಿ 73,84,462 ಸಂಚಾರಿ ನಿಯಮ ಉಲ್ಲಂಘನೆಯ ಪ್ರಕರಣಗಳಲ್ಲಿ ಬೈಕ್ ಸವಾರರು 258.27 ಲಕ್ಷ ರೂ. ದಂಡ ಬಾಕಿ ಉಳಿಸಿಕೊಂಡಿದ್ದಾರೆ. ಸರಕು ಆಟೋ ರಿಕ್ಷಾಗಳಿಂದ 80.45 ಲಕ್ಷ ರೂ. ಕಾರುಗಳಿಂದ 10.36 ಲಕ್ಷ ಪ್ರಕರಣಗಳಲ್ಲಿ 41.5  ಕೋಟಿ ರೂ., ಪ್ಯಾಸೆಂಜರ್ ಆಟೋ ರಿಕ್ಷಾಗಳಿಂದ 10.47 ಕೋಟಿ ರೂ. ಟೆಂಪೋ, ಸ್ಕೂಟರ್, ಆ್ಯಂಬುಲೆನ್ಸ್, ಸರಕು ಸಾಗಣೆ ಲಾರಿ ಮುಂತಾದ ವಾಹನ ಸವಾರರಿಂದ 2018 ರಿಂದ ಈವರೆಗೆೆ 92,84,828 ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ 329 ಕೋಟಿ ರೂ. ದಂಡ ದಂಡ ವಸೂಲಿಯಾಗಬೇಕಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ದಂಡ ಕಟ್ಟದ ವಾಹನ ಸವಾರರಿಗೆ ಮನೆಗೆ ನೋಟಿಸ್ ಕಳುಹಿಸಿ ಎಚ್ಚರಿಸಲಾಗಿತ್ತು. ಇನ್ನುಮುಂದೆ ವಾಹನ ತಪಾಸಣೆ ಸಂದರ್ಭದಲ್ಲಿ ಹಳೇ ಪ್ರಕರಣಗಳಲ್ಲಿ ದಂಡ ಬಾಕಿ ಉಳಿಸಿಕೊಂಡಿರುವುದು ಕಂಡು ಬಂದರೆ, ನೋಟಿಸ್ ಕೊಟ್ಟು ವಾಹನ ಜಪ್ತಿ ಮಾಡಲಿದ್ದಾರೆ.  ಬಾಕಿ ದಂಡ ಕಟ್ಟಿ ವಾಹನ ಬಿಡಿಸಿಕೊಳ್ಳಬೇಕು ಎಂದು ಹಿರಿಯ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net