ಕರೊನಾಗೆ ಒಂದೇ ದಿನ ಐವರ ಸಾವು ; ತುಮಕೂರು ಜಿಲ್ಲೆಯಲ್ಲಿ 93 ಜನರಿಗೆ ಪಾಸಿಟಿವ್

corona
Published on

ತುಮಕೂರು: ಜಿಲ್ಲೆಯಲ್ಲಿ 93 ಜನರಿಗೆ ಮಂಗಳವಾರ ಕರೊನಾ ಸೋಂಕು ದೃಢವಾಗಿದ್ದು, ಚಿಕಿತ್ಸೆ ಲಕಾರಿಯಾಗದೆ ಐವರು ಮೃತಪಟ್ಟಿದ್ದಾರೆ.

ತುಮಕೂರು ತಾಲೂಕಿನಲ್ಲಿ ಕರೊನಾ ನಾಗಾಲೋಟ ಮುಂದುವರಿದಿದ್ದು 42 ಜನರಿಗೆ ಸೋಂಕು ತಗುಲಿದೆ, ಕುಣಿಗಲ್ 11, ಕೊರಟಗೆರೆ 10, ಪಾವಗಡದಲ್ಲಿ 9 ಜನರಿಗೆ ಸೋಂಕು ತಗುಲಿದೆ. ಉಳಿದಂತೆ ಮಧುಗಿರಿ 8, ತುರುವೇಕೆರೆ 5, ಗುಬ್ಬಿ 4, ಶಿರಾ 2, ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ ತಲಾ ಒಬ್ಬರಿಗೆ ಸೋಂಕು ದೃಢವಾಗಿದೆ.

ತುಮಕೂರು, ಕುಣಿಗಲ್‌ನಲ್ಲಿ ತಲಾ ಒಬ್ಬರು ಗರ್ಭಿಣಿಯರು, ಪಾವಗಡ ಹಾಗೂ ತುಮಕೂರಿನಲ್ಲಿ ತಲಾ ಒಬ್ಬರು ಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿದೆ. ಪ್ರಾಥಮಿಕ ಸಂಪರ್ಕದಿಂದ ಬರೊಬ್ಬರಿ 97 ಜನರಿಗೆ ಹಾಗೂ ದ್ವಿತೀಯ ಸಂಪರ್ಕದಿಂದ 17 ಜನರಿಗೆ ಸೋಂಕು ದೃಢಪಟ್ಟಿದೆ. 60 ಪುರುಷರು, 33 ಮಹಿಳೆಯರಿಗೆ ಸೋಂಕು ತಗುಲಿದ್ದು, ಇದರಲ್ಲಿ ಇಬ್ಬರು ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ 13 ಜನರೂ ಇದ್ದಾರೆ.

ತುಮಕೂರು ತಾಲೂಕು ಹೆಬ್ಬೂರು ಗ್ರಾಮದಲ್ಲಿ ಮೂರು ಕೋವಿಡ್ ಪ್ರಕರಣ ವರದಿಯಾಗಿದ್ದು, ಒಂಭತ್ತು ತಿಂಗಳ ತುಂಬು ಗರ್ಭಿಣಿೆ (26), ಆಕೆಯ ಪತಿ (29) ಹಾಗೂ ಆರು ತಿಂಗಳ ಮತ್ತೊರ್ವ ಗರ್ಭಿಣಿಗೆ ಕೋವಿಡ್ ಸೋಂಕು ತಗುಲಿದೆ. ಹೆರಿಗೆಗೆ ಪೂರ್ವದಲ್ಲಿ ವೈದ್ಯರ ಸಲಹೆಯಂತೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ನಡೆಸಿದಾಗ ಸೋಂಕು ದೃಢವಾಗಿದೆ. ಸೋಂಕಿತರ ಮನೆಯ ಸುತ್ತಮುತ್ತ ಸೀಲ್‌ಡೌನ್ ವಾಡಿ ಕಂಟೇನ್ಮೆಂಟ್ ಪ್ರದೇಶವನ್ನಾಗಿ ೋಷಿಸಲಾಗಿದೆ. ಸೋಮವಾರ 55 ವರ್ಷದ ಸೋಂಕಿತ ವ್ಯಕ್ತಿಯ ಪ್ರಾರ್ಥಮಿಕ ಸಂಪರ್ಕದಲ್ಲಿದ್ದ ಆರು ತಿಂಗಳ ಗರ್ಭಿಣಿಗೆ (27) ಪಾಸಿಟಿವ್ ಬಂದಿದೆ. ಗ್ರಾಮದಲ್ಲಿ ಒಟ್ಟು 7 ಕೋವಿಡ್ ಸಕ್ರಿಯ ಪ್ರಕರಣವಿದೆ.

ಒಟ್ಟು 63 ಮಂದಿ ಸಾವು: ಕರೊನಾ ಮಂಗಳವಾರ ಐವರನ್ನು ಬಲಿ ತೆಗೆದುಕೊಂಡಿದೆ, ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 63ಕ್ಕೇರಿದ್ದು ಕೋವಿಡ್ ಆಸ್ಪತ್ರೆಯಲ್ಲಿ ಇನ್ನೂ 8 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ತುಮಕೂರು ತಾಲೂಕು ಕುಂಟರಾಮನಪಾಳ್ಯದ 70 ವರ್ಷದ ವೃದ್ಧ, ತುಮಕೂರು ನಗರದ ಪಿ.ಎಚ್.ಕಾಲನಿಯ 67 ವರ್ಷದ ವೃದ್ಧ, ವಿದ್ಯಾನಗರದ 73 ವರ್ಷದ ವೃದ್ಧೆ, ಸದಾಶಿವನಗರದ 69 ವರ್ಷದ ಪುರುಷ ಹಾಗೂ ಮಧುಗಿರಿ ತಾಲೂಕು ಕೆ.ಆರ್.ಬಡಾವಣೆಯ 70 ವರ್ಷದ ವೃದ್ಧ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net