93.07 ಲೀಟರ್​ ಮದ್ಯ ಜಪ್ತಿ

93.07 liters of liquor seized
ಮುದ್ದೇಬಿಹಾಳ ತಾಲೂಕಿನ ಮಡಿಕೇಶ್ವರ ತಾಂಡಾ ಬಳಿಯ ಫ್ರೆಂಡ್ಸ್​ ಡಾಭಾ ಮೇಲೆ ಅಬಕಾರಿ ಪೊಲೀಸರು ದಾಳಿ ನಡೆಸಿ ಅಕ್ರಮ ಮದ್ಯ ವಶಪಡಿಸಿಕೊಂಡರು. ಜ್ಯೋತಿ ಮೇತ್ರಿ, ನಬಿಸಾಬ್​, ಸಿದ್ದು ಕುರಬತಲ್ಲಿ ಮತ್ತಿತರರಿದ್ದಾರೆ.
Published on

ವಿಜಯಪುರ : ಮುದ್ದೇಬಿಹಾಳ ತಾಲೂಕಿನ ಮಡಿಕೇಶ್ವರ ತಾಂಡಾ ಬಳಿಯ ಡಾಭಾವೊಂದರ ಮೇಲೆ ದಾಳಿ ನಡೆಸಿದ ಅಬಕಾರಿ ಪೊಲೀಸರು 93.07 ಲೀಟರ್​ ಮದ್ಯ ಜಪ್ತಿ ಮಾಡಿದ್ದಾರೆ.

ಮುದ್ದೇಬಿಹಾಳ ವಲಯ ವ್ಯಾಪ್ತಿಯ ಮುದ್ದೇಬಿಹಾಳ ತಾಲೂಕಿನ ಮಡಿಕೇಶ್ವರ ತಾಂಡಾ ಬಳಿಯ ಫ್ರೆಂಡ್ಸ್​ ಡಾಭಾದ ಮೇಲೆ ಅಬಕಾರಿ ಪೊಲೀಸರು ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿದ್ದ 7 ಲೀಟರ್​ ಹೊರ ರಾಜ್ಯದ ಮದ್ಯ, 23.670 ಲೀಟರ್​ ಐಎಂಎಲ್​ ಹಾಗೂ 62.400 ಲೀಟರ್​ ಬೀಯರ್​ ಸೇರಿ ಒಟ್ಟು 37,490 ರೂ. ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ. ಡಾಭಾ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಬಕಾರಿ ನಿರೀಕಿ ಜ್ಯೋತಿ ಮೇತ್ರಿ ನೇತೃತ್ವದಲ್ಲಿ ದಾಳಿ ನಡೆದಿದೆ. ಮುಖ್ಯ ಪೇದೆ ನಬಿಸಾಬ್​ ಹಾಗೂ ಪೇದೆ ಸಿದ್ದು ಕುರಬತಲ್ಲಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net