ಲೋಕ ಅದಾಲತ್‌ನಲ್ಲಿ 9192 ಪ್ರಕರಣಗಳು ಇತ್ಯರ್ಥ

HUN-JULY-12-4(LOK ADALATH)
Published on

ಹುಣಸೂರು: ನಗರದ ವಿವಿಧ ನ್ಯಾಯಾಲಯಗಳಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಒಟ್ಟು 9192 (5.05 ಕೋಟಿ ರೂ.ಗಳು)ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.

ಶನಿವಾರ ನ್ಯಾಯಾಲಯಗಳ ಆವರಣದ ವಿವಿಧ ಸ್ತರದ ನ್ಯಾಯಲಯಗಳಲ್ಲಿ ನ್ಯಾಯಾಧೀಶರು ಲೋಕ ಅದಾಲತ್‌ನಲ್ಲಿ ಸಲ್ಲಿಸಿದ್ದ ಸಿವಿಲ್, ಕ್ರಿಮಿನಲ್ ಮತ್ತು ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ಯಶಸ್ವಿಯಾದರು. ಈ ಪೈಕಿ ಚೆಕ್‌ಬೌನ್ಸ್ ಪ್ರಕರಣದಲ್ಲಿ 36 ಪ್ರಕರಣಗಳು(92.26 ಲಕ್ಷ ರೂ.ಗಳು), ಹಣ ವಸೂಲಾತಿಯ 3 ಪ್ರಕರಣಗಳು (33.62 ಲಕ್ಷ ರೂ.ಗಳು) ಮತ್ತು ಜನನ ಮತ್ತು ಮರಣ ನೋಂದಣಿಯ 32 ಪ್ರಕರಣಗಳು ಇತ್ಯರ್ಥಗೊಂಡವು.

ಲೋಕ ಅದಾಲತ್ ಕಾರ್ಯಕ್ರಮದಲ್ಲಿ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಗೋವಿಂದಯ್ಯ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಅನಿತಾ, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಭಾಗ್ಯಮ್ಮ, ಪ್ರಧಾನ ಸಿವಿಲ್ ನ್ಯಾಯಾಧೀಶೆ ಆಯಿಷಾ ಬಿ.ಪಿ.ಮಜಿದ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ನಮ್ರತಾ ಎಸ್.ಹೊಸಮಠ, ಸಹಾಯಕ ಸರ್ಕಾರಿ ಅಭಿಯೋಜಕಿ ಎಚ್.ಡಿ.ಪಾರ್ವತಿ ಮತ್ತು ವಕೀಲರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net