

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಭಾನುವಾರ 90 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಇದರಿಂದಾಗಿ, ಒಟ್ಟು ಪ್ರಕರಣ ಸಂಖ್ಯೆ 17,913ಕ್ಕೇರಿದೆ. 135 ಜನರು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೆ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 14,834. ಸದ್ಯ 2574 ಜನ ಸೋಂಕಿತರಿದ್ದು, ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ ಒಬ್ಬರು ಸಾವಿಗೀಡಾಗಿದ್ದಾರೆ. ಕರೊನಾದಿಂದ ಮೃತಪಟ್ಟವರ ಒಟ್ಟು ಸಂಖ್ಯೆ 505ಕ್ಕೆ ಏರಿದೆ. ಕೆಲ ದಿನದಿಂದ ಕರೊನಾ ಪ್ರಕರಣ ಸಂಖ್ಯೆ 200ಕ್ಕಿಂತ ಕಡಿಮೆ ಇರುವುದು ತುಸು ಸಮಾಧಾನದ ಸಂಗತಿಯಾಗಿದೆ. ವೈರಸ್ಅನ್ನು ಪೂರ್ತಿಯಾಗಿ ಗೆಲ್ಲಬೇಕಾದರೆ ಪರಸ್ಪರ ಅಂತರ ನಿರ್ವಹಣೆ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದೆ.