90 ಕಿಮೀ ಸೈಕಲ್ ರ್ಯಾಲಿ

Cycle Rally
Published on

ಬೀದರ್: ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನ ನಿಮಿತ್ತ 90 ಕಿಮೀ ಬೃಹತ್ ಸೈಕಲ್ ರ್ಯಾಲಿ ನಡೆಯಿತು.

ನಗರದಲ್ಲಿ ಬೆಳಗ್ಗೆ 6ಕ್ಕೆ ರ್ಯಾಲಿಗೆ ಜಿಲ್ಲಾಧಿಕಾರಿ ಗೋವಿಂದರಡ್ಡಿ ಚಾಲನೆ ನೀಡಿದರು. ವಾಯುಪಡೆ ತರಬೇತಿ ಕೇಂದ್ರದ ಸಿಬ್ಬಂದಿ, ಟೀಮ್ ಯುವಾ ತಂಡದ ಯುವಕರು ಸೇರಿ 35 ಸೈಕ್ಲಿಸ್ಟ್ಗಳು ಪಾಲ್ಗೊಂಡಿದ್ದರು. ಡಿಸಿ ಗೋವಿಂದರಡ್ಡಿ ಅವರು ಹೊನ್ನಿಕೇರಿ ಕ್ರಾಸ್ವರೆಗೆ, ಎಸ್ಪಿ ಡೆಕ್ಕಾ ಕಿಶೋರಬಾಬು ಭಾಲ್ಕಿ ಪಟ್ಟಣದವರೆಗೆ ಸೈಕಲ್ ಓಡಿಸಿದರೆ, ಸಹಾಯಕ ಆಯುಕ್ತ ಮಹ್ಮದ್ ನಯೀಮ್ ಮೋಮಿನ್ ಬಸವಕಲ್ಯಾಣವರೆಗೆ 90 ಕಿಮೀ ಸೈಕಲ್ ಚಲಾಯಿಸಿ ಗಮನ ಸೆಳೆದರು. ಬಸವಕಲ್ಯಾಣ ಎಸಿ ರಮೇಶ ತಲ್ಲೂರ, ಕೇಂದ್ರ ಪ್ರವಾಸೋದ್ಯಮ ಅಧಿಕಾರಿ ಚಂದ್ರಾ ನಾಯಕ್, ಕೇದಾರನಾಥ, ರಾಜ್ಯ ಪ್ರವಾಸೋದ್ಯಮ ಅಕಾರಿ ಬೇಬಿ ಬೊಂಗಾ ಬ್ರಹ್ಮಾನಂದರಡ್ಡಿ, ಅಭಿಷೇಕ್ ಚಿಂತಾಮಣಿ, ಟೀಮ್ ಯುವಾ ಸಂಚಾಲಕ ವಿನಯ ಮಾಳಗೆ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net