

ರೋಣ: ಇಲ್ಲಿನ ಪಿಎಲ್‌ಡಿ ಬ್ಯಾಂಕ್‌ನ ಏಳು ಕ್ಷೇತ್ರಗಳಿಗೆ ಈಗಾಗಲೇ ಅವಿರೋಧ ಆಯ್ಕೆಯಾಗಿದ್ದು, ಉಳಿದ 7 ಕ್ಷೇತ್ರಗಳಿಗೆ ಭಾನುವಾರ ಮತದಾನ ನಡೆಯಿತು. ಬೆಳಗ್ಗೆ 9ರಿಂದ 4ಗಂಟೆ ವರೆಗೆ ಶಾಂತಿಯುತ ಮತದಾನ ಜರುಗಿ ಒಟ್ಟು ಶೇ 90ರಷ್ಟು ಮತದಾರರು ಹಕ್ಕು ಚಲಾಯಿಸಿದರು. ಮತದಾರ ಪಟ್ಟಿಯ ವಿಚಾರವಾಗಿ ನ್ಯಾಯಾಲಯ ಫಲಿತಾಂಶ ಘೋಷಣೆಗೆ ತಡೆಯಾಜ್ಞೆ ನೀಡಿದೆ ಎಂದು ಚುನಾವಣಾಧಿಕಾರಿ ಪ್ರಶಾಂತ ಮುಧೋಳ ಮಾಹಿತಿ ನೀಡಿದ್ದಾರೆ.