

ದೇವದುರ್ಗ: ತಾಲೂಕಿನ ಜಾಲಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಮಹಾತ್ಮಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ 90ಕೂಲಿಕಾರರ ಉದ್ಯೋಗ ದಿನ ಜೀರೋ ಮಾಡಿದ್ದು ಖಂಡನೀಯ. ಕೂಡಲೇ ಕೂಲಿಪಾವತಿ ಮಾಡುವಂತೆ ಒತ್ತಾಯಿಸಿ ಜಾಲಹಳ್ಳಿ ಗ್ರಾಪಂ ಬಿಲ್‌ಕಲೆಕ್ಟರ್ ವೆಂಕೋಬಗೆ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ ಭಾನುವಾರ ಮನವಿ ಸಲ್ಲಿಸಿತು.
ಖಾತ್ರಿ ಯೋಜನೆಯಡಿ 90 ಕೂಲಿಕಾರರು ನಿಯಮ ಪ್ರಕಾರ ಅರ್ಜಿ ಸಲ್ಲಿಸಿದ್ದು, ಕೆಲಸ ಡಿಮಾಂಡ್ ಕೂಡ ಹಾಕಲಾಗಿತ್ತು. ಕೆಲಸ ಹಾಗೂ ಕೂಲಿ ಜೀರೋ ಹಾಕಲಾಗಿದೆ. ಈ ಹಿಂದೆ ಇದೇರೀತಿ ಮಾಡಿದಾಗ ಮತ್ತೊಮ್ಮೆ ಕೆಲಸ ನೀಡದೆ ಜೀರೋ ಮಾಡಲಾಗಿದೆ.
ಯಾವ ಕಾರಣಕ್ಕೆ ಜೀರೋ ಮಾಡಿದ್ದಾರೆ ಎನ್ನುವ ಬಗ್ಗೆ ಕಾರಣ ನೀಡುತ್ತಿಲ್ಲ. ಇವರ ಕೆಲಸವನ್ನು ನಕಲಿಖಾತೆ ಸೃಷ್ಟಿಸಿ ಅನುದಾನ ದುರ್ಬಳಕೆ ಮಾಡಿಕೊಳ್ಳುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ಕೂಡಲೇ ಅರ್ಜಿ ಸಲ್ಲಿಸಿ ಕೆಲಸ ಮಾಡಿದ ಕೂಲಿಕಾರರಿಗೆ ಕೂಲಿಹಣ ಪಾವತಿ ಮಾಡಬೇಕು. ಅರ್ಜಿ ಸಲ್ಲಿಸಿದ ಎಲ್ಲ ಕೂಲಿಕಾರರಿಗೆ ಡಿಮಾಂಡ್ ಹಾಕಿ ಕೆಲಸ ನೀಡಬೇಕು. ನಿರ್ಲಕ್ಷ್ಯ ಮಾಡಿದರೆ ಹೋರಾಟ ನಡೆಸುವ ಜತೆಗೆ ಮೇಲಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.
ತಿಮ್ಮಣ್ಣ ಆರೇರ್, ಚಂದ್ರು ಇತರರಿದ್ದರು.